ಮಡಿಕೇರಿ, ಆ. 30: ಇತ್ತೀಚೆಗೆ ನಡೆದ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಔರ್ ಫ್ಯಾಮಿಲಿ ಚಾರಿಟಿ ಗ್ರೂಪ್‍ನಿಂದ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಔರ್ ಗ್ರೂಪ್ ಕುಟುಂಬದ ಪ್ರಮುಖ ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ. ಯಾಕುಬ್ ವಹಿಸಿದ್ದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದ ಶುಹೇಬ್ ಬಜೆಗುಂಡಿ ಹಾಗೂ ಮುಫ್ಸೀನ ಅವರಿಗೆ ಪಿ. ಅಬ್ಬಾಸ್ ಹಾಜಿ ಸನ್ಮಾನಿಸಿದರು. ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಸಾಧನೆ ಮಾಡಿದ ರಝಾನಾಗೆ ಅವರ ಅನುಪಸ್ಥಿತಿಯಲ್ಲಿ ಅವರ ಕುಟುಂಬಸ್ಥರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ಔರ್ ಫ್ಯಾಮಿಲಿ ಚಾರಿಟಿ ಗ್ರೂಪ್ ಪ್ರಮುಖರು ಹಸ್ತಾಂತರಿಸಿದರು. ಔರ್ ಫ್ಯಾಮಿಲಿ ಚಾರಿಟಿ ಗ್ರೂಪ್ ಸಂಸ್ಥಾಪಕ ಅಬ್ದುಲ್ ಮಜೀದ್ ಕಾರ್ಯಕ್ರಮ ನಿರೂಪಿಸಿದರು. ಹಾರಿಸ್ ಗೋಪಾಲಪುರ ಸ್ವಾಗತಿಸಿದರು. ಚಾರಿಟಿ ಗ್ರೂಪ್ ಸಹ ಸಂಸ್ಥಾಪಕರಾದ ಯೂಸುಫ್ ದುಬೈ, ಹುಸೇನ್ ಫೈಜಿ ಬಜೆಗುಂಡಿ, ಅಬ್ದುಲ್ ರಜಾಕ್ ಬಜೆಗುಂಡಿ, ರಿಯಾಜ್ ಕುಶಾಲನಗರ, ಇರ್ಶಾದ್ ಕೂಡಿಗೆ, ನೌಶಾದ್ ಯಾಕುಬ್, ಸಿದ್ದಿಕ್ ಪೆರಿಯಡ್ಕ ಹಾಗೂ ಔರ್ ಫ್ಯಾಮಿಲಿ ಚಾರಿ ಗ್ರೂಪ್ ಕುಟುಂಬಸ್ಥರು ಪಾಲ್ಗೊಂಡಿದ್ದರು.