ಸೋಮವಾರಪೇಟೆ, ಆ. 30: ನೆಹರು ಯುವ ಕೇಂದ್ರ, ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಹಾಗೂ ದೊಡ್ಡತೋಳೂರಿನ ವಿಜಯಪ್ರಕಾಶ್ ಯುವಕ ಸಂಘದ ಆಶ್ರಯದಲ್ಲಿ ತೋಳೂರುಶೆಟ್ಟಳ್ಳಿಯಲ್ಲಿ ಕೊರೊನಾ ಸೋಂಕು ಹರಡುವದನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಕಾರ್ಯಾಗಾರ ನಡೆಯಿತು.
ನೆಹರು ಯುವ ಕೇಂದ್ರದ ಸ್ವಯಂಸೇವಕ ಲಕ್ಷ್ಮೀಕಾಂತ್, ವಿಜಯಪ್ರಕಾಶ್ ಯುವಕ ಸಂಘದ ಅಧ್ಯಕ್ಷ ರಜಿತ್, ಕಾರ್ಯದರ್ಶಿ ಆದರ್ಶ್, ಗ್ರಾಮ ಪಂಚಾಯಿತಿ ಸಿಬ್ಬಂದಿ ಸುಧಾಕರ್, ಪ್ರಮುಖರಾದ ಸೋಮಯ್ಯ, ಕೌಶಿಕ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.