ವೀರಾಜಪೇಟೆ, ಆ. 30: ವೀರಾಜಪೇಟೆ ಲಯನ್ಸ್ ಕ್ಲಬ್ ಹಾಗೂ ಕಾವೇರಿ ಪದವಿ ಮತ್ತು ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ‘ಹಸಿರು-ಮಡಿಲು’ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಪದವಿ ಕಾಲೇಜಿನ ಪ್ರಂಶುಪಾಲೆ ಡಾ. ಎ.ಎಸ್. ಪೂವಮ್ಮ ಸಸಿ ನೆಡುವುದರ ಮೂಲಕ ಉದ್ಘಾಟಿಸಿದರು. ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ವನಮಹೋತ್ಸವದ ಬಗ್ಗೆ ವಿವರಿಸಿದರು.
ಕ್ಲಬ್ನ ಅಧ್ಯಕ್ಷ ಎ.ಪಿ. ಪ್ರಸನ್ನ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪುಷ್ಪರಾಜ್, ಕೋಶಾಧಿಕಾರಿ ಅಮ್ಮಣಿಚಂಡ ಪ್ರವೀಣ್, ವಲಯ ಸಲಹೆಗಾರ ಎ.ಪಿ. ಸುಬ್ರಮಣಿ, ಕ್ಲಬ್ನ ಸಂಪರ್ಕಾಧಿಕಾರಿ ಗಿಲ್ ಸೋಮಯ್ಯ, ಕಾಲೇಜಿನ ಆಡಳಿತಾಧಿಕಾರಿ ಲತಾಕುಮಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.