ಸುಂಟಿಕೊಪ್ಪ, ಆ. 30: ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಗೌರಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು.

ಶ್ರೀ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಗೌರಿ-ಗಣೇಶ ಮೂರ್ತಿಗಳಿಗೆ ಗಣಹೋಮ, ಮಹಾಪೂಜೆ, ತೀರ್ಥ-ಪ್ರಸಾದ ವಿತರಿಸಿ ಮಂಟಪದಲ್ಲಿ ಸುಂಟಿಕೊಪ್ಪ ನಗರದ ಮುಖ್ಯ ರಸ್ತೆÉಯಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

ನಂತರ ಯಂಕನ ಉಲ್ಲಾಸ್ ಮತ್ತು ಯಂಕನ ಕರುಂಬಯ್ಯ ಅವರ ಕೆರೆಯಲ್ಲಿ ಶ್ರೀ ಗೌರಿ ಗಣೇಶನ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಅರ್ಚಕರಾದ ದರ್ಶನ್ ಭಟ್, ಮನೋಜ್ ಭಟ್ ಪೂಜಾ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭ ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಎಂ. ಸುರೇಶ್ ಹಾಗೂ ಇತರರು ಹಾಜರಿದ್ದರು.