ಮಡಿಕೇರಿ, ಆ. 30: ನಗರ ಪುನರ್ವಸತಿ ಕಾರ್ಯಕರ್ತರು ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳಿಗೆ ಗೌರವಧನದ ಆಧಾರದಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ನಗರ ಪುನರ್ವಸತಿ ಕಾರ್ಯಕರ್ತರು ಮತ್ತು ಗ್ರಾಮೀಣ ಪುನರ್ವಸತಿ ಹುದ್ದೆಗೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣ, ಅನುತ್ತೀರ್ಣ. ಶೇ. 40ಕ್ಕಿಂತ ಮೇಲ್ಪಟ್ಟು ಶೇ. 75 ಕ್ಕಿಂತ ಕಡಿಮೆ ವಿಶೇಷಚೇತನ ಪ್ರಮಾಣ ಹೊಂದಿರಬೇಕು. 18 ರಿಂದ 45 ವರ್ಷದೊಳಗಿರಬೇಕು.

ಹುದ್ದೆಗಳು ಖಾಲಿ ಇರುವ ವಿವರ ಯುಆರ್‍ಡಬ್ಲು: ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ವೀರಾಜಪೇಟೆ ಪಟ್ಟಣ ಪಂಚಾಯಿತಿ.

ವಿಆರ್‍ಡಬ್ಲು: ಮಡಿಕೇರಿ ತಾಲೂಕಿನ ಬಲ್ಲಮಾವಟಿ, ಚೆಂಬು, ಕುಂಜಿಲ, ಕೊಣಂಜಗೇರಿ, ಎಮ್ಮೆಮಾಡು, ಸೋಮವಾರಪೇಟೆ ತಾಲೂಕಿನ ಬೇಳೂರು, ಚೆಟ್ಟಳ್ಳಿ, ದುಂಡಳ್ಳಿ, ಹಂಡ್ಲಿ, ನೇರುಗಳಲೆ, ಕಿರಗಂದೂರು ಹಾಗೂ ವೀರಾಜಪೇಟೆ ತಾಲೂಕಿನ ಅಮ್ಮತ್ತಿ, ಅರುವತ್ತೋಕ್ಲು, ಬಾಳೆಲೆ, ಬಿರುನಾಣಿ, ಬಲ್ಯಮಂಡೂರು, ಬಿಟ್ಟಂಗಾಲ, ದೇವರಪುರ, ಗೋಣಿಕೊಪ್ಪ, ಹೊಸೂರು, ಹಾಲುಗುಂದ, ನಿಟ್ಟೂರು, ನಾಲ್ಕೇರಿ, ಪೊನ್ನಂಪೇಟೆ, ಪೊನ್ನಪ್ಪಸಂತೆ, ಟಿ. ಶೆಟ್ಟಿಗೇರಿ, ಕದನೂರು, ಕೆ. ಬಾಡಗ, ಕಿರುಗೂರು, ಪಾಲಿಬೆಟ್ಟ, ತಿತಿಮತಿ, ಶ್ರೀಮಂಗಲ, ಚೆನ್ನಯ್ಯನಕೋಟೆ.

ಅರ್ಜಿ ನಮೂನೆಗಳನ್ನು ಸಂಬಂಧಿಸಿದ ತಾಲೂಕಿನ ಎಂಆರ್‍ಡಬ್ಲ್ಯುಗಳಿಂದ ಉಚಿತವಾಗಿ ಪಡೆದು ಸೆಪ್ಟೆಂಬರ್ 30 ರೊಳಗೆ ಸಲ್ಲಿಸಬೇಕು ಎಂದು ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.