ಮಡಿಕೇರಿ, ಆ. 29 : ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು, ಇದರೊಂದಿಗೆ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 20 ಕ್ಕೇರಿದೆ.
ಸೋಮವಾರಪೇಟೆ ತಾಲೂಕು, ಕುಶಾಲನಗರದ ಬೈಚನಹಳ್ಳಿಯ ನಿವಾಸಿ 60 ವರ್ಷದ ಮಹಿಳೆಯೊಬ್ಬರು ಹಿಂದಿನಿಂದಲೂ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು. ತಾ.27 ರಂದು ಕುಶಾಲನಗರದ ಖಾಸಗಿ ಕ್ಲಿನಿಕ್‍ಗೆ ತೆರಳಿ ಪರೀಕ್ಷಿಸಿಕೊಂಡಿದ್ದು, ಅಲ್ಲಿ ಅವರ ಸಕ್ಕರೆ ಮಟ್ಟವನ್ನು ಪರೀಕ್ಷಿಸಿದ್ದು, ಸಕ್ಕರೆ ಮಟ್ಟ ತುಂಬಾ ಹೆಚ್ಚಿರುವುದು ಕಂಡು ಬಂದಿದೆ. ನಂತರ ಮೊಬೈಲ್ ತಂಡದಿಂದ ಇವರ ಗಂಟಲು/ಮೂಗು ದ್ರವವನ್ನು ಸಂಗ್ರಹಿಸಿ ಕೋವಿಡ್ ಪರೀಕ್ಷೆಗೆ ಕಳುಹಿಸಲಾಯಿತು.
ತಾ.28 ರಂದು ಖಾಸಗಿ ಕ್ಲಿನಿಕ್‍ಗೆ ತೆರಳಿದ್ದು, ಅಲ್ಲಿ ಅವರಿಗೆ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ತೆರಳಲು ಸಲಹೆ ನೀಡಲಾಗಿದೆ. ಆದರೆ ಅವರು ಆಸ್ಪತ್ರೆಗೆ ಬರದೆ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ತಾ.28 ರಂದು ಅಪರಾಹ್ನ 2.30 ಗಂಟೆಗೆ ಮನೆಯಲ್ಲಿಯೇ ಮೃತರಾಗಿದ್ದಾರೆ. ಇಂದು ಅವರ ಕೋವಿಡ್ ಪರೀಕ್ಷಾ ವರದಿ ಬಂದಿದ್ದು, ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಹೊಸದಾಗಿ 37 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1379 ಪ್ರಕರಣಗಳು ವರದಿಯಾಗಿದ್ದು, 1136 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 223 ಪ್ರಕರಣಗಳು ಸಕ್ರಿಯವಾಗಿವೆ.
ಕೋವಿಡ್ ಆಸ್ಪತ್ರೆಯಲ್ಲಿ 81 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 64 ಮಂದಿ, ಹೋಮ್ ಐಸೋಲೇಶನ್‍ನಲ್ಲಿ 78 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 255 ನಿಯಂತ್ರಿತ ವಲಯಗಳಿವೆ. ಜಿಲ್ಲೆಯಾದ್ಯಂತ 224 ನಿಯಂತ್ರಿತ ವಲಯಗಳಿವೆ.
ಹೊಸ ಪ್ರಕರಣಗಳ ವಿವರ
ಮಡಿಕೇರಿ ರಾಘವೇಂದ್ರ ದೇವಾಲಯ ಬಳಿಯ 68 ವರ್ಷದ ಪುರುಷ ಮತ್ತು 31 ವರ್ಷದ ಮಹಿಳೆ, ಸೋಮವಾರಪೇಟೆ ತಾಲೂಕಿನ ಗರಗಂದೂರು ಸೇತುವೆ ಬಳಿಯ 34 ವರ್ಷದ ಮಹಿಳೆ, ರಿಮಾಂಡ್ ಹೋಮ್ ಬಳಿಯ 28 ಮತ್ತು 57 ವರ್ಷದ ಪುರುಷರು, ಸೋಮವಾರಪೇಟೆ ಗರ್ವಾಲೆ ಗ್ರಾಮದ 34 ವರ್ಷದ ಪುರುಷ, ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 62 ವರ್ಷದ ಮಹಿಳೆ, 29 ಮತ್ತು 70 ವರ್ಷದ ಪುರುಷರು, ಕೊಡ್ಲಿಪೇಟೆಯ ಕಿರಿಕೊಡ್ಲಿ ಗ್ರಾಮದ 60 ವರ್ಷದ ಪುರುಷ, ದೇಚೂರಿನ ಆಂಜನೇಯ ಕಟ್ಟೆಯ 36 ವರ್ಷದ ಪುರುಷ, ಸೋಮವಾರಪೇಟೆ ತೋಳೂರು ಶೆಟ್ಟಳ್ಳಿಯ 16 ವರ್ಷದ ಬಾಲಕ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ 33 ವರ್ಷದ ಪುರುಷ, ಮೂರ್ನಾಡುವಿನ ಗಾಂಧೀನಗರದ 26 ವರ್ಷದ ಮಹಿಳೆ, ವೀರಾಜಪೇಟೆ ನೆಹರು ನಗರದ ಮಸೀದಿ ಬಳಿಯ 33 ವರ್ಷದ ಪುರುಷ, 7 ಮತ್ತು 2 ವರ್ಷದ ಬಾಲಕ ಹಾಗೂ 49 ವರ್ಷದ ಮಹಿಳೆ, ಕುಶಾಲನಗರ ನಾಗೇಗೌಡ ಬಡಾವಣೆಯ ಬಲಮುರಿ ದೇವಾಲಯ ಹಿಂಭಾಗದ 42 ವರ್ಷದ ಮಹಿಳೆ, ವೀರಾಜಪೇಟೆ ವಿದ್ಯಾನಗರದ 58 ಮತ್ತು 80 ವರ್ಷದ ಮಹಿಳೆಯರು, ವೀರಾಜಪೇಟೆಯ ನಿಸರ್ಗ ಲೇಔಟಿನ 32 ವರ್ಷದ ಮಹಿಳೆ ಮತ್ತು 8 ವರ್ಷದ ಬಾಲಕಿ, ವೀರಾಜಪೇಟೆ ಮೊಗರಗಲ್ಲಿ ಮಸೀದಿ ಬಳಿಯ 25 ವರ್ಷದ ಮಹಿಳೆ, ವೀರಾಜಪೇಟೆ ಡೆಂಟಲ್ ಕಾಲೇಜು ಬಳಿಯ 32 ವರ್ಷದ ಮಹಿಳೆ, ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿಯ ನಲ್ವತ್ತೆಕ್ರೆಯಲ್ಲಿನ 50 ವರ್ಷದ ಪುರುಷ, ಕುಶಾಲನಗರ ಬೈಚನಹಳ್ಳಿಯ ವಿಲ್ಕೋ ಗೋಲ್ಡ್ ಬಳಿಯ 60 ವರ್ಷದ ಮಹಿಳೆ, ಗುಡ್ಡೆಹೊಸೂರುವಿನ 35 ವರ್ಷದ ಪುರುಷ, ಕುಶಾಲನಗರ ಕೂಡಿಗೆಯ ಸೈನಿಕ ಶಾಲೆಯ ವಸತಿಗೃಹದ 35 ವರ್ಷದ ಪುರುಷ, ಕುಶಾಲನಗರ ಸುಂದರನಗರ ವೃತ್ತ ಬಳಿಯ 50 ವರ್ಷದ ಪುರುಷ, ವೀರಾಜಪೇಟೆ ಹುದಿಕೇರಿಯ ಪ್ರಾಥಮಿಕ ಶಾಲೆ ಎದುರಿನ 46 ವರ್ಷದ ಪುರುಷ, ಪಿರಿಯಾಪಟ್ಟಣ ಬಾರೆಹೊಸಹಳ್ಳಿಯ ಸಮುದಾಯ ಭವನ ಸಮೀಪದ 38 ವರ್ಷದ ಮಹಿಳೆ, ದೇಚೂರಿನ ಆಂಜನೇಯ ಕಟ್ಟೆಯ 13 ವರ್ಷದ ಬಾಲಕಿ, ದಕ್ಷಿಣ ಕನ್ನಡದ ಕಲ್ಲುಗುಂಡಿಯ 66 ವರ್ಷದ ಪುರುಷ, ಕಲ್ಕಂದೂರುವಿನ 49 ವರ್ಷದ ಮಹಿಳೆ, ಮೈಸೂರಿನ 56 ವರ್ಷದ ಪುರುಷ, ಮಡಿಕೇರಿ ಎಫ್.ಎಂ.ಸಿ. ಕಾಲೇಜು ಹಿಂಭಾಗದ 63 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.