ಸೋಮವಾರಪೇಟೆ, ಆ. 28: ಸಮೀಪದ ಟಾಟಾ ಕಾಫಿ ಸಂಸ್ಥೆಯ ಕೋವರ್‍ಕೊಲ್ಲಿ ವಿಭಾಗದ 60 ಕಾರ್ಮಿಕರ ತಂಡÀದಿಂದ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ವನಮಹೋತ್ಸವ ನಡೆಯಿತು.

ಶಾಲೆಯ ಆವರಣದಲ್ಲಿ ಬೆಳೆದಿದ್ದ ಕುರುಚಲುಗಳನ್ನು ಕಡಿದು ಶುಚಿಗೊಳಿಸಲಾಯಿತು. ಇದೇ ಸಂದರ್ಭ ಶಾಲಾ ಆವರಣದಲ್ಲಿ ವಿವಿಧ ಜಾತೀಯ ಗಿಡಗಳನ್ನು ನೆಡಲಾಯಿತು. ಶಾಲಾ ಮುಖ್ಯ ಶಿಕ್ಷಕ ಎಸ್.ಎ. ಯೋಗೇಶ್ ಮಾತನಾಡಿ, ಟಾಟಾ ಕಾಫಿ ಸಂಸ್ಥೆಯ ವತಿಯಿಂದ ಸರ್ಕಾರಿ ಶಾಲಾ ಅಭಿವೃದ್ಧಿಗಾಗಿ ಟೇಬಲ್ ಬೆಂಚು ಸೇರಿದಂತೆ ಇನ್ನಿತರ ಉಪಕರಣಗಳನ್ನು ಪ್ರತಿ ವರ್ಷ ನೀಡುತ್ತಿರುವದು ಶ್ಲಾಘನೀಯ ಎಂದರು.

ಈ ಸಂದರ್ಭ ಸಂಸ್ಥೆಯ ವ್ಯವಸ್ಥಾಪಕರಾದ ಅಪ್ಪಯ್ಯ, ಶಾಲಾ ಶಿಕ್ಷಕರು, ಎಸ್‍ಡಿಎಂಸಿ ಸಮಿತಿ ಮಾಜಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.