ಶನಿವಾರಸಂತೆ, ಆ. 28: ಶನಿವಾರಸಂತೆ ರೋಟರಿ ಸಂಸ್ಥೆ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗುಡುಗಳಲೆ ಜಾತ್ರಾ ಮೈದಾನದಲ್ಲಿ ಶ್ರೀ ಬಸವೇಶ್ವರ ಹಾಗೂ ಶ್ರೀ ಕಾಳಿಕಾಂಬ ದೇವಾಲಯಗಳ ಆವರಣದಲ್ಲಿ ಹಲವಾರು ಹೂವಿನ ಹಾಗೂ ಔಷಧಿ ಗಿಡಗಳನ್ನು ನೆಡಲಾಯಿತು. ಸಂಸ್ಥೆ ಅಧ್ಯಕ್ಷ ಹೆಚ್.ವಿ. ದಿವಾಕರ್, ಸದಸ್ಯರಾದ ಮೋಹನ್ ಕುಮಾರ್, ವಸಂತ್‍ಕುಮಾರ್, ವಿನೂತ್‍ಶಂಕರ್, ಸುರೇಶ್, ಶುಭು ಇತರರು ಹಾಜರಿದ್ದರು.