ಮಡಿಕೇರಿ, ಆ. 28: ವೀರಾಜಪೇಟೆ ತಾಲೂಕಿನ ಪೆÇನ್ನಪ್ಪಸಂತೆ ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕು ಮಂಡಲ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಅವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ಮಡಿಕೇರಿ-ಪೆÇನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯುವ ಮೋರ್ಚಾದ ಅಧ್ಯಕ್ಷರಾಗಿ ಇರನ್ ದೇವಯ್ಯ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಞ್ಞಂಗಡ ಅರುಣ್ ಭೀಮಯ್ಯ, ವೀರಾಜಪೇಟೆ ತಾಲೂಕು ಉಪಾಧ್ಯಕ್ಷ ಕುಪ್ಪಂಡ ಗಿರೀಶ್, ಪ್ರಧಾನ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಪ್ರವೀಣ್ ಹಾಗೂ ಕೊಡಗು ಜಿಲ್ಲಾ ಕಾರ್ಯದರ್ಶಿಗಳಾದ ಗುಮ್ಮಟ್ಟಿರ ಕಿಲನ್ ಗಣಪತಿ ಹಾಗೂ ಜಿಲ್ಲಾ ಖಜಾಂಚಿ ಚೆಪ್ಪುಡಿರ ಮಾಚಯ್ಯ, ಸಿ. ಸುಬ್ರಮಣಿ, ಯುವ ಮೋರ್ಚಾ ವೀರಾಜಪೇಟೆ ತಾಲೂಕು ಉಪಾಧ್ಯಕ್ಷ ಬೊಳಕಾರಂಡ ಗಗನ್ ಗಣಪತಿ ಮತ್ತು ಪಟ್ರಂಗಡ ಪೆÇನ್ನಣ್ಣ ರಂಜನ್ ಹಾಗೂ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ಸಿ. ಭರತ್ ಹಾಗೂ ಪಕ್ಷದ ಹಲವು ಪ್ರಮುಖರು ಭಾಗಿಯಾಗಿದ್ದರು.