ಮಡಿಕೇರಿ, ಆ. 27: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಪ್ರಕರಣಗಳು ಒಟ್ಟು 18 ಕ್ಕೇರಿದೆ.

ವೀರಾಜಪೇಟೆ ತಾಲೂಕು, ಐಮಂಗಲ ಗ್ರಾಮದ ನಿವಾಸಿ 55 ವರ್ಷದ ಪುರುಷರೊಬ್ಬರು ಹಿಂದಿನಿಂದಲೂ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ತಾ.17ರಂದು ನೇರವಾಗಿ ಕೋವಿಡ್ ಆಸ್ಪತ್ರೆಗೆ ಬಂದಿದ್ದು, ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ.

ಇವರನ್ನು ತಕ್ಷಣ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಯಿತು. ಇವರ ದೇಹದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇದ್ದುದರಿಂದ ಐ.ಸಿ.ಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಬೆಳಿಗ್ಗೆ 10 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ದೇಹದ ಅಂತ್ಯಕ್ರಿಯೆಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಯಿತು.

ಹೊಸ ಪ್ರಕರಣಗಳ ವಿವರ

ಜಿಲ್ಲೆಯಲ್ಲಿ ಹೊಸದಾಗಿ 39 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1289 ಪ್ರಕರಣಗಳು ವರದಿಯಾಗಿದ್ದು, 1074ಮಂದಿ ಗುಣಮುಖರಾಗಿದ್ದಾರೆ. ಒಟ್ಟು 18 ಮಂದಿ ಸಾವನ್ನಪ್ಪಿದ್ದು, 197 ಪ್ರಕರಣಗಳು ಸಕ್ರಿಯವಾಗಿವೆ.

ಕೋವಿಡ್ ಆಸ್ಪತ್ರೆಯಲ್ಲಿ 76 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 52 ಮಂದಿ, ಹೋಮ್ ಐಸೋಲೇಶನ್‍ನಲ್ಲಿ 69 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 216 ನಿಯಂತ್ರಿತ ವಲಯಗಳಿವೆ.

ನಾಪೆÇೀಕ್ಲು ಎಮ್ಮೆಮಾಡುವಿನ ಹಳೆತಾಲೂಕಿನ 22 ವರ್ಷದ ಮಹಿಳೆ, ಮೂರ್ನಾಡು ಗಾಂಧೀನಗರ ಸರ್ಕಾರಿ ಶಾಲೆ ಬಳಿಯ 55 ವರ್ಷದ ಮಹಿಳೆ, ನಾಪೆÇೀಕ್ಲು ಕಲ್ಲುಮೊಟ್ಟೆಯ ವೆಂಕಟೇಶ್ವರ ದೇವಾಲಯ ಸಮೀಪದ 25 ವರ್ಷದ ಮಹಿಳೆ, ಮಡಿಕೇರಿ ಪುಟಾಣಿ ನಗರದ 52 ವರ್ಷದ ಪುರುಷ, ದೇಚೂರಿನ ಗಣಪತಿ ದೇವಾಲಯ ಬಳಿಯ 39 ವರ್ಷದ ಮಹಿಳೆ, ಮೈಸೂರಿನ ಆವರ್ತಿಕೊಪ್ಪದ 19 ವರ್ಷದ ಪುರುಷ, ವೀರಾಜಪೇಟೆ ವಿದ್ಯಾನಗರದ 33 ವರ್ಷದ ಪುರುಷ, ವೀರಾಜಪೇಟೆ ನಿಸರ್ಗ ಲೇಔಟಿನ 37 ವರ್ಷದ ಪುರುಷ, ಸೋಮವಾರಪೇಟೆ ಪೆÇಲೀಸ್ ವಸತಿಗೃಹದ 28 ವರ್ಷದ ಪುರುಷ, ಸೋಮವಾರಪೇಟೆ ಎಂ.ಡಿ ಬ್ಲಾಕಿನ ವಿಜಯ ಬ್ಯಾಂಕ್ ಬಳಿಯ 29 ವರ್ಷದ ಪುರುಷ.

ಮಡಿಕೇರಿ ನೀರುಕೊಲ್ಲಿಯ ಸಿದ್ದಪ್ಪಾಜಿ ದೇವಾಲಯ ಬಳಿಯ 20 ವರ್ಷದ ಮಹಿಳೆ, ಮಡಿಕೇರಿ ಹಾಕತ್ತೂರುವಿನ ತೊಂಬತ್ತುಮನೆಯ 35 ವರ್ಷದ ಮಹಿಳೆ, 44 ವರ್ಷದ ಪುರುಷ, 67 ವರ್ಷದ ಮಹಿಳೆ, 9 ವರ್ಷದ ಬಾಲಕ, 19 ವರ್ಷದ ಪುರುಷ, 42 ವರ್ಷದ ಮಹಿಳೆ ಮತ್ತು 51 ವರ್ಷದ ಪುರುಷ, ಮೂರ್ನಾಡುವಿನ ಹೊದವಾಡ ಗ್ರಾಮ ಮತ್ತು ಅಂಚೆಯ 38 ವರ್ಷದ ಮಹಿಳೆ, 10 ವರ್ಷದ ಬಾಲಕ, 41 ವರ್ಷದ ಪುರುಷ ಮತ್ತು 11 ವರ್ಷದ ಬಾಲಕಿ.

ವೀರಾಜಪೇಟೆ ಚಿಕ್ಕಮಡೂರು ಗ್ರಾಮದ 54 ವರ್ಷದ ಮಹಿಳೆ, 18 ವರ್ಷದ ಪುರುಷ, 72 ಮತ್ತು 65 ವರ್ಷದ ಮಹಿಳೆಯರು, ಮಡಿಕೇರಿ ನೀರುಕೊಲ್ಲಿಯ 16 ವರ್ಷದ ಬಾಲಕಿ, ಮಡಿಕೇರಿ ನೆಲಜಿಯ ಎಮ್ಮೆಮಾಡು ಜಂಕ್ಷನ್ನಿನ 49 ವರ್ಷದ ಪುರುಷ, ವೀರಾಜಪೇಟೆ ನೆಹರು ನಗರದ 20 ವರ್ಷದ ಮಹಿಳೆ, ಮಡಿಕೇರಿ ಗಣಪತಿ ಬೀದಿಯ 48 ವರ್ಷದ ಮಹಿಳೆ, ಕುಶಾಲನಗರ ಗೌಡ ಸಮಾಜ ಬಳಿಯ 41 ವರ್ಷದ ಪುರುಷ, ಕುಶಾಲನಗರ ನಾಗೇಗೌಡ ಬಡಾವಣೆಯ ಬಲಮುರಿ ದೇವಾಲಯ ಹಿಂಭಾಗದ 53 ವರ್ಷದ ಪುರುಷ, ಕುಶಾಲನಗರ ಮಾದಾಪಟ್ಟಣದ 22 ವರ್ಷದ ಮಹಿಳೆ, ಕುಶಾಲನಗರ ಹೆಬ್ಬಾಲೆಯ ಮರೂರಿನ 37 ವರ್ಷದ ಪುರುಷ, ಮಡಿಕೇರಿ ಕೆನರಾ ಬ್ಯಾಂಕ್ ಸಮೀಪದ 23 ವರ್ಷದ ಮಹಿಳೆ, ಸೋಮವಾರಪೇಟೆ ನಗ್ರೂರುವಿನ ತಾಲೂಕು ಪಂಚಾಯಿತಿ ವಸತಿಗೃಹದ 31 ವರ್ಷದ ಪುರುಷ, ನಾಪೆÇೀಕ್ಲು ಹಳೆತಾಲೂಕಿನ 23 ವರ್ಷದ ಪುರುಷ.

ಪೆÇನ್ನಂಪೇಟೆಯ ನಲ್ಲೂರು ಗ್ರಾಮ ಮತ್ತು ಅಂಚೆಯ 25 ವರ್ಷದ ಮಹಿಳೆ, ಮಡಿಕೇರಿ ಜಯನಗರ 18ನೇ ಬ್ಲಾಕಿನ 52 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.