ವೀರಾಜಪೇಟೆ, ಆ. 27 : ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ನ್ಯಾಯಾಂಗ ಬಂಧನದಲ್ಲಿದ್ದ ಕುರ್ಚಿ ಗ್ರಾಮದ ಸುಬ್ರಮಣಿ ಎಂಬಾತನನ್ನು ಷರತ್ತಿನ ಮೇರೆ ಜಾಮೀನಿನಲ್ಲಿ ಬಿಡುಗಡೆಗೊಳಿಸುವಂತೆ ವೀರಾಜಪೇಟೆ ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮಡಿಕೇರಿಯ ಪ್ರಭಾರ ನ್ಯಾಯಾಧೀಶ ಚಂದ್ರಶೇಖರ್ ಅವರು ಆದೇಶಿಸಿದ್ದಾರೆ.
ಆರೋಪಿ ಸುಬ್ರಮಣಿ ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಆಕೆ ಗರ್ಭೀಣಿಯಾಗಲು ಕಾರಣನಾಗಿರುವದಾಗಿ ಪೋಷಕರು ನೀಡಿದ ದೂರಿನ ಮೇರೆ ಶ್ರೀಮಂಗಲ ಪೊಲೀಸರು ತಾ: 18-7-2019 ರಂದು ಅತ್ಯಾಚಾರ ಹಾಗೂ ಪೋಕ್ಸೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು. ಆರೋಪಿ ಪರ ಲೀಗಲ್ ಏಡ್ ಪ್ಯಾನಲ್ ವಕೀಲ ಕೀತಿಯಂಡ ಸಿ. ಪ್ರದ್ಯುಮ್ನ ವಾದಿಸಿದರು.