ವೀರಾಜಪೇಟೆ, ಆ. 27: ವೀರಾಜಪೇಟೆಯ ದಖ್ಖನಿ ಮೊಹಲ್ಲಾದ ವಿಜಯ ವಿನಾಯಕ ಗಣೋಶೋತ್ಸವ ಸಮಿತಿ ಹಾಗೂ ಇಲ್ಲಿನ ತೆಲುಗರಬೀದಿಯ ಅಂಗಾಳಪರಮೇಶ್ವರಿ ದೇವಸ್ಥಾನದ ವಿನಾಯಕ ಯುವಕ ಭಕ್ತ ಮಂಡಳಿಯಿಂದ ಇಲ್ಲಿನ ಗೌರಿಕೆರೆಯಲ್ಲಿ ಗಣೇಶನ ಮೂರ್ತಿಗಳನ್ನು ಸಾಂಪ್ರದಾಯ ಬದ್ಧವಾಗಿ ವಿಧಿ ವಿಧಾನಗಳೊಂದಿಗೆ ವಿಸರ್ಜಿಸಲಾಯಿತು.

ತಾ.22ರಂದು ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು ಕೋವಿಡ್-19 ರ ಹಿನೆÀ್ನಲೆಯಲ್ಲಿ ಮೂರು ದಿನಗಳ ಅವಧಿಯಲ್ಲಿ ನಿರ್ಬಂಧದಂತೆ ವಿಸರ್ಜಿಸಲಾಯಿತು.