ಮಡಿಕೇರಿ: ಕುಟ್ಟ ನಾತಗಲ್ ಕಾಲೋನಿಯ ಗಿರಿಜನ ಕುಟುಂಬಗಳಿಗೆ ವೀರಾಜಪೇಟೆ ತಾಲೂಕು ಬಿಜೆಪಿ ಸದಸ್ಯ ಮುಕ್ಕಾಟಿರ ನವೀನ್, ಪೂಜೆಕಲ್ಲು ಬಿಜೆಪಿ ಕಾರ್ಯಕರ್ತರಾದ ಕರುಂಬಯ್ಯ, ಜನಾರ್ದನ, ರವಿ ಹಾಗೂ ಸಂಘ ಪರಿವಾರದ ಕಳ್ಳಂಗಡ ಕಾಳಪ್ಪ ಸೇರಿ ಆಹಾರ ಕಿಟ್ಗಳನ್ನು ವಿತರಣೆ ಮಾಡಿದರು.ಮಡಿಕೇರಿ: ನಗರದ ಮುತ್ತಪ್ಪ ದೇವಾಲಯದ ಹಿಂಭಾಗದಲ್ಲಿ ಕೊರೊನಾ ಸೋಂಕಿತರು ಪತ್ತೆಯಾದ ಹಿನ್ನೆಲೆ ಈ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದ್ದು, ಇಲ್ಲಿನ ಎಂಟು ಕುಟುಂಬಗಳಿಗೆ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಸಹಯೋಗದಲ್ಲಿ ಯುವ ಜೆ.ಡಿ.ಎಸ್. ಹಾಗೂ ಮಹಿಳಾ ಜೆಡಿಎಸ್ನ ಕಾರ್ಯಕರ್ತರು ದಿನಸಿ ಕಿಟ್ ವಿತರಿಸಿದರು.
ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಅವರ ಆದೇಶದ ಮೇರೆಗೆ ಕಿಟ್ ವಿತರಿಸಲಾಯಿತು. ಮಡಿಕೇರಿ ಮಹಿಳಾ ಜೆ.ಡಿ.ಎಸ್. ಅಧ್ಯಕ್ಷೆ ಸುನಂದಾ, ಉಪಾಧ್ಯಕ್ಷೆ ಮಮತ, ಯುವ ಜೆಡಿಎಸ್ ಕಾರ್ಯಕರ್ತರಾದ ಮುಜಿಬ್, ಫ್ರಿನ್ಸ್ ಹಾಜರಿದ್ದರು.ಸೋಮವಾರಪೇಟೆ: ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರದ ವತಿಯಿಂದ ತಾಲೂಕಿನ ಬಾಣಾವರ ಗಿರಿಜನ ಹಾಡಿಯ ಮಕ್ಕಳಿಗೆ ಮಾಸ್ಕ್ ವಿತರಿಸಲಾಯಿತು.
ಮಾಸ್ಕ್ ವಿತರಿಸಿ ಮಾತನಾಡಿದ ಮಕ್ಕಳ ಸಹಾಯವಾಣಿ ಕೇಂದ್ರದ ಕಾರ್ಯಕರ್ತೆ ಕುಸುಮ, ಮಕ್ಕಳ ಆರೋಗ್ಯ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು. ಕೊರೊನಾ ಸೋಂಕು ಹರಡುವದರಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಜ್ವರ, ಶೀತ, ಕೆಮ್ಮಿನ ಲಕ್ಷಣಗಳಿದ್ದರೆ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.