ಸುಂಟಿಕೊಪ್ಪ, ಆ. 26: ವರ್ಕ್‍ಶಾಪ್ ಮಾಲೀಕರ ಸಂಘದ ಅಧ್ಯಕ್ಷರಾಗಿ ಪಿ.ಆರ್. ಸುನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಯಾಗಿ ಯು. ಮಣಿಕಂಠ ಅವರನ್ನು ಆಯ್ಕೆಗೊಳಿಸಲಾಯಿತು.

ಮಹಾಸಭೆಯು ಸಂಘದ ಅಧ್ಯಕ್ಷ ವಿ.ಎ. ಸಂತೋಷ್ ಅಧ್ಯಕ್ಷತೆಯಲ್ಲಿ ನಡೆಯಿತು. 2020-21ನೇ ಸಾಲಿನ ಉಪಾಧ್ಯಕ್ಷರಾಗಿ ಅನೀಸ್, ಸಹಕಾರ್ಯದರ್ಶಿಯಾಗಿ ಉದಯಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಸತೀಶ್ ಕೆ., ಖಜಾಂಚಿಯಾಗಿ ಆರ್. ಸತೀಶ್, ಗೌರವಾಧ್ಯಕ್ಷರುಗಳಾಗಿ ವಿ.ಎ. ಸಂತೋಷ್, ಕೆ.ಪಿ. ವಿನೋದ್, ಪಿ.ಆರ್. ಸುಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿ.ಎಸ್. ರಮೇಶ್, ತಂಗವೇಲ್, ಕೆ.ಪಿ. ಸತೀಶ್, ಪ್ರದೀಪ್, ಆರ್. ಸುರೇಶ್, ಯೇಸುದಾಸ್, ರಜಾಕ್ ಹಾಗೂ ಹೂವೆಗೌಡ ಅವರುಗಳನ್ನು ನೇಮಕಗೊಳಿಸಲಾಯಿತು.