*ಗೋಣಿಕೊಪ್ಪ, ಆ. 26: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿ ಪಟ್ರಂಗಡ ಶ್ರೀಮಂತ್ ಮುತ್ತಣ್ಣ, ಪ್ರಧಾನ ಕಾರ್ಯದರ್ಶಿಗಳಾಗಿ ಕುಪ್ಪಂಡ ಸಚ್ಚಿತ್ ಸೋಮಣ್ಣ, ಕಾರ್ಯದರ್ಶಿಯಾಗಿ ಮುರುವಂಡ ಅಕೀಲ್, ಸೂರ್ಯ ಎಂ.ಎಂ., ಉಪಾಧ್ಯಕ್ಷರಾಗಿ ಚೆಂಗಪ್ಪ ಗುಮ್ಮಟ್ಟಿರ, ಅವರುಗಳನ್ನು ನೇಮಕ ಮಾಡಲಾಯಿತು.
ಕೈಕೇರಿ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ತಾಲೂಕು ಯುವ ಮೋರ್ಚಾ ಸಮಿತಿ ಸಭೆಯಲ್ಲಿ ವೀರಾಜಪೇಟೆ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕವನ್ ಕಾರ್ಯಪ್ಪ ಅಧ್ಯಕ್ಷತೆಯಲ್ಲಿ, ತಾಲೂಕು ಮಂಡಳ ಅಧ್ಯಕ್ಷ ನೆಲ್ಲಿರ ಚಲನ್ ನೇತೃತ್ವದಲ್ಲಿ ಈ ಆಯ್ಕೆ ನಡೆಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಞ್ಞಂಗಡ ಅರುಣ್ ಭೀಮಯ್ಯ, ವೀರಾಜಪೇಟೆ ತಾಲೂಕು ಉಪಾಧ್ಯಕ್ಷ ಕುಪ್ಪಂಡ ಗಿರೀಶ್, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ವಾಟೆರೀರ ಬೋಪಣ್ಣ, ಅಜ್ಜಿಕುಟ್ಚೀರ ಪ್ರವೀಣ್, ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಸುಭಾಷ್ ಮ್ಯಾಥ್ಯೂ, ಮಾಜಿ ಆರ್.ಎಂ.ಸಿ. ಉಪಾಧ್ಯಕ್ಷ ಚೇಕ್‍ಪೂವಂಡ ಸುಬ್ರಮಣಿ, ಗೋಣಿಕೊಪ್ಪ ತಾಲೂಕು ಪಂಚಾಯಿತಿ ಸದಸ್ಯ ಜಯಾ, ಹಾತೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ದರ್ಶನ್ ನಂಜಪ್ಪ, ತಾಲೂಕು ಯುವ ಮೋರ್ಚಾ ಉಪಾಧ್ಯಕ್ಷ ಪೆÇನ್ನಣ್ಣ ರಂಜನ್, ಕಾರ್ಯದರ್ಶಿ ತಿಮ್ಮಯ್ಯ ಎಂ.ಎಂ., ಪ್ರಧಾನ್ ಹಾಗೂ ಪಕ್ಷದ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.