ಕುಶಾಲನಗರ, ಆ. 26: ಕುಶಾಲನಗರದಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮ ಘಟಕದಲ್ಲಿ ಉಪಯೋಗಕ್ಕೆ ಬಾರದ ಅವಧಿ ಮೀರಿದ ಭಾರೀ ಪ್ರಮಾಣದ ಬಿಯರ್ ಅನ್ನು ಚೆಲ್ಲುವ ಮೂಲಕ ಅಬಕಾರಿ ಇಲಾಖೆ ವತಿಯಿಂದ ಅದನ್ನು ನಾಶಪಡಿಸಲಾಯಿತು.ಮಾರ್ಚ್‍ನಿಂದ ಲಾಕ್‍ಡೌನ್ ಪರಿಸ್ಥಿತಿ, ಬಳಿಕ ಮಳೆಗಾಲದ ಕಾರಣದಿಂದಾಗಿ (ಮೊದಲ ಪುಟದಿಂದ) ಸಂಗ್ರಹಿತವಿದ್ದ ಸುಮಾರು 2086 ಬಾಕ್ಸ್‍ಗಳಷ್ಟು ವಿವಿಧ ಬ್ರ್ಯಾಂಡ್‍ಗಳ ಬಿಯರ್ ಅನ್ನು ಸುರಿದು ನಾಶಪಡಿಸಲಾಗಿದೆ. ಇದರ ಮೌಲ್ಯ ಒಟ್ಟು ರೂ. 36 ಲಕ್ಷದಷ್ಟಾಗಿದೆ.ಅಬಕಾರಿ ಇಲಾಖೆಯ ಸೋಮವಾರಪೇಟೆ ಉಪವಿಭಾಗದ ಉಪ ಅಧೀಕ್ಷಕಿ ಚೈತ್ರ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆಸಲಾ ಯಿತು. ಈ ಸಂದರ್ಭ ಮಾಧ್ಯಮದ ವರೊಂದಿಗೆ ಮಾತನಾಡಿದ ಚೈತ್ರ ಅವರು, ಲಾಕ್‍ಡೌನ್-ಮಳೆ ಕಾರಣದಿಂದಾಗಿ ಸಾಕಷ್ಟು ಪ್ರಮಾಣದ ಬಿಯರ್‍ಗಳು ಮಾರಾಟಗೊಂಡಿ ರಲಿಲ್ಲ. ಬೇಡಿಕೆ ಕೊರತೆ ಕಾರಣ ದಿಂದಾಗಿ ಇವುಗಳ ಅವಧಿ ಮುಗಿದಿದ್ದು, ಈ ಬಾರಿ ದಾಖಲೆ ಪ್ರಮಾಣದ ಮೊತ್ತವಾದ ರೂ. 36 ಲಕ್ಷದಷ್ಟು ಮೌಲ್ಯದ ಬಿಯರ್ ಅನ್ನು ಸುರಿದು ನಾಶಪಡಿಸಲಾಯಿತು ಎಂದು ಮಾಹಿತಿ ನೀಡಿದರು.ಈ ಸಂದರ್ಭ ಸೋಮವಾರ ಪೇಟೆ ತಾಲೂಕು ಅಬಕಾರಿ ನಿರೀಕ್ಷಕರಾದ ಎಂ.ಪಿ. ಸಂಪತ್ ಕುಮಾರ್, ಎ. ಮಂಜು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಂದೀಶ್, ಘಟಕದ ವ್ಯವಸ್ಥಾಪಕ ವಿಠಲ್ ಕದಂ, ಲೆಕ್ಕಾಧಿಕಾರಿ ಮೊಹಮ್ಮದ್ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.