ಗೋಣಿಕೊಪ್ಪ ವರದಿ, ಆ. 26: ಕೊಡಗು ವನವಾಸಿ ಕಲ್ಯಾಣ ವತಿಯಿಂದ ಟಿ. ಶೆಟ್ಟಿಗೇರಿ ವ್ಯಾಪ್ತಿಯ ವಿವಿಧ ಕಾಲೋನಿಯ ಸುಮಾರು 33 ನಿವಾಸಿಗಳಿಗೆ ರೈನ್ಕೋಟ್ ವಿತರಣೆ ಮಾಡಲಾಯಿತು. ಮತ್ತಾರ ಕಾಲೋನಿಯ 9, ಅಯ್ಯಪ್ಪ ಕಾಲನಿಯ 5, ಗುಟ್ಟುಕೊಲ್ಲಿ ಕಾಲೋನಿಯ 10, ಬಂಗಾಮ್ ಕಾಲೋನಿಯ 7 ಜನರಿಗೆ ವಿತರಿಸಲಾಯಿತು. ಕೊಡಗು ವನವಾಸಿ ಕಲ್ಯಾಣ ಉಪಾಧ್ಯಕ್ಷ ಚೆಟ್ಟಂಗಡ ಮಹೇಶ್ ಮಂದಣ್ಣ, ಸಂಘಟನಾ ಕಾರ್ಯದರ್ಶಿ ಹರೀಶ್ ಹಾಗೂ ಮಹಿಳಾ ಕಾರ್ಯಕರ್ತೆ ಸರೋಜ, ಆರ್ಎಸ್ಎಸ್ ಕಾರ್ಯಕರ್ತರಾದ ಕಟ್ಟೇರ ಬೋಪಣ್ಣ, ಮಾಣೀರ ಬೋಪಣ್ಣ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಞ್ಞಂಗಡ ಅರುಣ್ ಭೀಮಯ್ಯ, ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ ಉಪಸ್ಥಿತರಿದ್ದರು.