ಸಿದ್ದಾಪುರ: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಸೀಲ್ಡೌನ್ ಪ್ರದೇಶಗಳ ನಿವಾಸಿಗಳಿಗೆ ಅಗತ್ಯ ಆಹಾರದ ಕಿಟ್ಗಳನ್ನು ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ನೀಡಿದರು.
ಅಲ್ಲದೇ ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು ಹಾಗೂ ಕೊಂಡಂಗೇರಿಯ ನದಿ ತೀರದ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಅಲ್ಪಸಂಖ್ಯಾತ ಅಧ್ಯಕ್ಷ ಮಹಮ್ಮದ್ ರಫೀಕ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಪಿ.ವಿ. ಜಾನ್ಸನ್, ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಎಂ.ಹೆಚ್. ಮೂಸಾ, ಗ್ರಾ.ಪಂ. ಮಾಜಿ ಸದಸ್ಯರುಗಳಾದ ಎಸ್.ಬಿ. ಪ್ರತೀಶ್, ಕರ್ಪಯ್ಯ, ಜಾಫರ್ ಇನ್ನಿತರರು ಹಾಜರಿದ್ದರು.*ಕಡಂಗ: ವೀರಾಜಪೇಟೆಯ ಚಾಮಿಯಾಲ ಗ್ರಾಮದಲ್ಲಿ ಕೊಡಗು ಯುವ ಸ್ಪಂದನಾ ದಳದ ಸದಸ್ಯರು ಹಾಗೂ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ನಜ್ಹಿರ್ ಚಾಮಿಯಾಲ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ 7 ಕುಟುಂಬಗಳಿಗೆ ಆಹಾರ ಕಿಟ್ಟನ್ನು ವಿತರಿಸಿದರು. 4 ಕುಟುಂಬದವರನ್ನು ಕುವಲೆರ ಐನ್ ಮನೆಗೆ ಸ್ಥಳಾಂತರಿಸಲಾಯಿತು.
ಜೆಡಿಎಸ್ ನ ಹೋಬಳಿ ಅಧ್ಯಕ್ಷ ರಶೀದ್, ತಾಲೂಕು ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಸೈಫುದ್ದೀನ್, ಮಜೀದ್, ಸೂಫಿ ಉಪಸ್ಥಿತರಿದ್ದರು.