ಮಡಿಕೇರಿ, ಆ. 25: ಮಂಡ್ಯ ಜಿಲ್ಲೆಯಲ್ಲಿ ಪ್ರಥಮವಾಗಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಜೆಎಸ್‍ಎಸ್ ಕರ್ನಾಟಕ ಮುಕ್ತ ವಿದ್ಯಾಲಯ, ಮೈಸೂರು ಅವರ ಮಾನ್ಯತೆಯೊಂದಿಗೆ ‘ಕಲಿಕಾ ಕೇಂದ್ರ’ವನ್ನು ಮಂಡ್ಯದ ‘ಹಿಂದಿ ಭವನ’ದ ಸಂಸ್ಥೆಗೆ ನೀಡಲಾಗಿದೆ.

ಸಾರ್ವಜನಿಕರು ಎಸ್‍ಎಸ್‍ಎಲ್.ಸಿ ಪರೀಕ್ಷೆಯನ್ನು ದೂರ ಶಿಕ್ಷಣದಲ್ಲಿ ನೇರವಾಗಿ ಪಡೆಯಲು ಕನಿಷ್ಟ 7ನೇ ತರಗತಿ (ಉತ್ತೀರ್ಣ/ ಅನುತ್ತೀರ್ಣ) ಓದಿರಬೇಕು ಹಾಗೂ ಶೈಕ್ಷಣಿಕ ವರ್ಷದ ಮಾರ್ಚ್ 1 ನೇ ತಾರೀಖಿಗೆ 15 ವರ್ಷ ವಯೋಮಿತಿ ಪೂರ್ಣಗೊಂಡಿರಬೇಕು. ಅಂತವರು ಪರೀಕ್ಷೆಯನ್ನು ನೇರವಾಗಿ ಪಡೆಯಲು ಅರ್ಹರಾಗಿದ್ದಾರೆ. ಪರೀಕ್ಷೆಗೆ ಪ್ರವೇಶ ಪಡೆಯಲು ಅಕ್ಟೋಬರ್ 10 ಕೊನೆಯ ದಿನವಾಗಿದೆ.

ಆಸಕ್ತ ಹಾಗೂ ಅರ್ಹ ಸಾರ್ವಜನಿಕರು ಇದರ ಉಪಯೋಗವನ್ನು ಪಡೆದು ಮುಂದಿನ ವಿದ್ಯಾಭ್ಯಾಸಕ್ಕೆ, ಸರ್ಕಾರಿ, ಅರೆ ಸರ್ಕಾರಿ ಇಲಾಖೆಗಳಲ್ಲಿ ಹುದ್ದೆ ಪಡೆಯಲು ಹಾಗೂ ಬಡ್ತಿ ಪಡೆಯಲು ನೆರವಾಗಲಿದೆ.

ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಪ್ರವೇಶ/ ಆವೇದನ ಪತ್ರ ಪಡೆಯಲು ಸಂಸ್ಥೆಯ ಸಮನ್ವಯಾಧಿಕಾರಿಗಳನ್ನು ಕಚೇರಿಯಲ್ಲಿ ಅಥವಾ ಕಚೇರಿ ದೂ. 08232-297297, 226667 ಮೊ. 9353832183, 9448268114 ನ್ನು ಸಂಪರ್ಕಿಸಬಹುದು ಎಂದು ಜೆಎಸ್‍ಎಸ್ ಕರ್ನಾಟಕ ಮುಕ್ತ ವಿದ್ಯಾಲಯದ ಸಮನ್ವಯಾಧಿಕಾರಿ ತಿಳಿಸಿದ್ದಾರೆ.