ಮಡಿಕೇರಿ, ಆ. 25: ಕಸ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಪರಿಸರ ರಕ್ಷಣೆ ಮಾಡಿ ಎಂಬ ಕೂಗು, ಜಾಗೃತಿ ಕಾರ್ಯಕ್ರಮಗಳು ಪ್ರತಿನಿತ್ಯ ನಡೆಯುತ್ತಿರುತ್ತವೆ. ಸರಕಾರದಿಂದ ಹಿಡಿದು ಸಂಘ - ಸಂಸ್ಥೆಗಳು ಈ ಬಗ್ಗೆ ಅರಿವು ಮೂಡಿಸುವಲ್ಲಿ ತೊಡಗಿಸಿಕೊಂಡಿವೆ. ಆದರೂ ಅದು ಜನ ಸಾಮಾನ್ಯರ ಕಿವಿಗೆ, ಮನಸಿಗೆ ನಾಟುವದಂತೂ ಕನಸಿನ ಮಾತೇ ಸರಿ.., ಇದಕ್ಕೊಂದು ಉದಾಹರಣೆ ಮಾದಾಪುರದಿಂದ ಸುಂಟಿಕೊಪ್ಪಕ್ಕೆ ತೆರಳುವ ಮಾರ್ಗ ಬದಿಯಲ್ಲಿ ಪ್ರಜ್ಞಾವಂತ ಮನುಜರು ಸುರಿದಿರುವ ಕಸದ ರಾಶಿ..! ರಸ್ತೆಯಲ್ಲಿ ಮೂಗು ಮುಚ್ಚಿಕೊಂಡೇ ಸಂಚರಿಸಬೇಕಿದೆ.
ಇಂತಹ ಪರಿಸ್ಥಿತಿಯಲ್ಲೂ ಪ್ರಜ್ಞಾವಂತರು (!) ಮೂಗು ಮುಚ್ಚಿಕೊಂಡೇ ಬಂದು ಕಸ ಸುರಿಯುತ್ತಿರುವದು ವಿಪರ್ಯಾಸವೇ ಸರಿ..! -ಜಾನ್ಸನ್