ಗೋಣಿಕೊಪ್ಪಲು, ಆ. 25: ಸ್ವಾವಲಂಬನೆ ಬದುಕಿಗೆ ಆಶ್ವಾಸನೆ, ಆಧಾರ ನೀಡಿ ಜಾತಿ ಧರ್ಮದ ವ್ಯತ್ಯಾಸ ಇಲ್ಲದೆ ಬದುಕಲು ಕಲಿಸು ತ್ತಿರುವ ಸ್ವಾಮಿ ಶ್ರೀ ಬೋಧ ಸ್ವರೂಪಾನಂದಜೀ ಮಹರಾಜ್ ಅವರು ಅಭಿನಂದನಾರ್ಹರು ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ನುಡಿದರು. ಅವರು ಪೆÇನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ನಡೆದ ಟೈಲರಿಂಗ್ ತರಬೇತಿ ಪಡೆದು ವೃತ್ತಿಯನ್ನು ಉದ್ಯಮವಾಗಿಸುವ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು. ಕೊಡಗು ಜಿಲ್ಲೆಗೆ ಹಿಂದಿನ ಎರಡು ವರ್ಷಗಳ ಕಾಲ ಬಂದೊದಗಿದ ಮಹಾಮಳೆಯ ದುರಂತದ ಸಮಯದಲ್ಲಿ ಸಾವಿರಾರು ಜನರಿಗೆ ಸಹಾಯ ಹಸ್ತ ಕಲ್ಪಿಸಿದಲ್ಲದೆ ಜಿಲ್ಲೆಯ ಹಲವು ಕಡೆ ಉಚಿತ ಹೊಲಿಗೆ ತರಬೇತಿ, ಕಂಪ್ಯೂಟರ್ ತರಬೇತಿಗಳನ್ನು ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ, ಲಾಕ್‍ಡೌನ್ ಸಂದರ್ಭ ಕೂಡ ಜಿಲ್ಲೆಯ ಎಲ್ಲ ಭಾಗದ ಸಾವಿರಾರು ಜನರಿಗೆ ಅಹಾರ ಕಿಟ್ ನೀಡಿ ವ್ಯವಸ್ಥೆ ಮಾಡಿರುತ್ತಾರೆ ಎಂದರು.

ಉಪನ್ಯಾಸಕರಾಗಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿ ಅಮ್ಮತ್ತಿಯ ತುಷಾರ್ ಕುಲಕರ್ಣಿ ಮಾತನಾಡಿ, ಸರ್ಕಾರ ಸ್ವಸಹಾಯ ಸಂಸ್ಥೆಗಳಿಗೆ ತುಂಬಾ ಪೆÇ್ರೀತ್ಸಾಹ ನೀಡುತಿದ್ದು, ನಬಾರ್ಡ್ ಬ್ಯಾಂಕಿನ ಮೂಲಕ ಸಾಲ ಮತ್ತು ಪೆÇ್ರೀತ್ಸಾಹಧನ ಸಹಾಯ ನೀಡುತ್ತಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊಡಗು ಚೇಂಬರ್ ಆಫ್ ಕಾಮರ್ಸ್‍ನ ಉಪಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಗೃಹಿಣಿಯರು ತಮ್ಮ ಪತಿಯರಿಗೆ ಆರ್ಥಿಕ ಸಹಕಾರ ನೀಡಲು ಸಾಧ್ಯವಾದರೆ ತಮ್ಮ ಬದುಕು ಸುಂದರ ಎನ್ನುವ ಕನಸು ಎಲ್ಲ ಗೃಹಿಣಿಯರಲ್ಲಿರುತ್ತದೆ. ಆ ಕನಸನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ವಾಮೀಜಿಯವರು ಗೃಹಿಣಿಯರಿಗೆ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ನೀಡಿದ್ದಾರೆ. ಅದರ ಸದುಪಯೋಗ ಪಡಿಸಿಕೊಳ್ಳಿ. ನೀವು ತಯಾರಿಸಿದ ವಸ್ತುಗಳು ಉತ್ತಮ ಗುಣಮಟ್ಟದ್ದಾಗಿದ್ದರೆ ಮಾರುಕಟ್ಟೆ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಪ್ರತಿಯೊಂದು ಅವಕಾಶವನ್ನು ವ್ಯಾಪಾರಿ ದೃಷ್ಟಿಯಿಂದ ಬಳಸಿಕೊಳ್ಳಿ ಎಂದರು.

ಇನ್ನೋರ್ವ ಮುಖ್ಯ ಅತಿಥಿ ‘ಶಕ್ತಿ’ ಪತ್ರಿಕೆಯ ಉಪಸಂಪಾದಕ ಚಿ.ನಾ. ಸೋಮೇಶ್ ಮಾತನಾಡಿ, ಈ ಕಾರ್ಯಕ್ರಮ ಭರತ ಭೂಮಿಯ ವೈಶಿಷ್ಟ್ಯತೆಯನ್ನು ಸಾರುತ್ತದೆ ವಿವಿಧತೆಯಲ್ಲಿ ಏಕತೆ, ಏಕತೆಯಲ್ಲಿ ಐಕ್ಯತೆ, ಐಕ್ಯತೆಯಲ್ಲಿ ಸಮಗ್ರತೆಯನ್ನು ಕಾಣಬಹುದು. ಇಲ್ಲಿ ಎಲ್ಲ ಜಾತಿ ಪಂಗಡದ ಜನರನ್ನು ಕಾಣುವಾಗ ಭಾರತಮಾತೆಯೇ ಇಲ್ಲಿ ಅವಿರ್ಭವಿಸಿದಂತೆ ಆಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸ್ವಾಮಿ ಬೋಧಸ್ವರೂಪಾನಂದಜೀ ಮಹರಾಜ್ ಮಾತನಾಡಿ ತರಬೇತಿ ಹೊಂದಿರುವ ಎಲ್ಲ ಟೈಲರುಗಳನ್ನು ಸೇರಿಸಿ ಸಂಸ್ಥೆಯನ್ನು ಪ್ರಾರಂಭಿಸುವ ಉದ್ದೇಶ ಹೊಂದಿದ್ದು ತಮ್ಮ ಸಂಸ್ಥೆಯಲ್ಲಿಯೇ ಸ್ಥಳಾವಕಾಶ ನೀಡುವ ಭರವಸೆ ನೀಡಿದರು. ಶ್ರೀ ರಾಮಕೃಷ್ಣ ಶಾರದಾಮಾತೆಯ ಆಶೀರ್ವಾದ ಮತ್ತು ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ತಮಗೆ ಸೇವಾಕಾರ್ಯ ಮಾಡಲು ಸಾಧ್ಯವಾಯಿತು ಎಂದರು.

ವೇದಿಕೆಯಲ್ಲಿ ಸಬೀತಾ ಕುಲಕರ್ಣಿ ಮತ್ತು ಮಡಿಕೇರಿ ಚೇಂಬರ್ ಆಫ್ ಕಾಮರ್ಸ್‍ನ ಮಾಜಿ ಅಧ್ಯಕ್ಷ ಅರುಣ್‍ಕುಮಾರ್ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ಚಂದನ್ ಕಾಮತ್ ನಿರೂಪಿಸಿದರು.