ಕುಶಾಲನಗರ, ಆ. 24: ಕುಶಾಲನಗರ ಪಟ್ಟಣ ಪಂಚಾಯ್ತಿ ಮೂಲಕ ರಥಬೀದಿಯಲ್ಲಿ ಕೈಗೊಳ್ಳಲಿರುವ ಕಾಂಕ್ರಿಟ್ ಪಾದಚಾರಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಅಪ್ಪಚ್ಚುರಂಜನ್ ಭೂಮಿಪೂಜೆ ನೆರವೇರಿಸಿದರು. ಪಂಚಾಯ್ತಿಯ ಎಸ್‍ಎಫ್‍ಸಿ ಯೋಜನೆಯಡಿಯಲ್ಲಿ ರೂ. 9.45 ಲಕ್ಷ (ಮೊದಲ ಪುಟದಿಂದ) ವೆಚ್ಚದಲ್ಲಿ ರಥಬೀದಿಯ ರಸ್ತೆಯ ಎರಡೂ ಬದಿಯಲ್ಲಿ ಪಾದಚಾರಿ ರಸ್ತೆ ನಿರ್ಮಾಣಗೊಳ್ಳಲಿದೆ.
ಕುಶಾಲನಗರ ಪಪಂ ವತಿಯಿಂದ 4.24 ಲಕ್ಷ ರೂ. ವೆಚ್ಚದಲ್ಲಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒದಗಿಸಿರುವ ರಕ್ತ ಪರೀಕ್ಷಾ ಯಂತ್ರಕ್ಕೆ ಅಪ್ಪಚ್ಚುರಂಜನ್ ಇದೇ ಸಂದರ್ಭ ಚಾಲನೆ ನೀಡಿದರು. ಈ ಸಂದರ್ಭ ಜಿಪಂ ಸದಸ್ಯೆ ಮಂಜುಳಾ, ಪಪಂ ಪ್ರಭಾರ ಮುಖ್ಯಾಧಿಕಾರಿ ನಾಚಪ್ಪ, ಅಭಿಯಂತರೆ ಶ್ರೀದೇವಿ, ಆರೋಗ್ಯಾಧಿಕಾರಿ ಉದಯಕುಮಾರ್, ಪಂಚಾಯ್ತಿ ಸದಸ್ಯರುಗಳಾದ ಅಮೃತ್‍ರಾಜ್, ಪ್ರಮೋದ್ ಮುತ್ತಪ್ಪ, ರೂಪಾ ಉಮಾಶಂಕರ್, ಜಯಲಕ್ಷ್ಮಿಚಂದ್ರು, ಜಯಲಕ್ಷ್ಮಿ ನಂಜುಂಡಸ್ವಾಮಿ, ನಾಮನಿರ್ದೇಶಿತ ಸದಸ್ಯರಾದ ಕೆ.ಜಿ.ಮನು, ಎಂ.ವಿ.ನಾರಾಯಣ್, ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಸದಸ್ಯರಾದ ವೈಶಾಖ್, ವಿ.ಡಿ.ಪುಂಡರೀಕಾಕ್ಷ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಧುಸೂದನ್, ಫಾರ್ಮಸಿಸ್ಟ್ ನಟರಾಜು ಮತ್ತಿತರರು ಇದ್ದರು.