ಕೊಡಗು ಜಿಲ್ಲೆಯ ಹಲವೆಡೆಗಳಲ್ಲಿ ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳು ಆಚರಣೆಯಾಯಿತು. ನಾಡಿನೆಲ್ಲೆಡೆ ರಾಷ್ಟ್ರ ಪ್ರೇಮದ ಸಂದೇಶ ಪಸರಿಸಿತು.ಸಹಕಾರ ಸಂಘ: ಕೂಡಿಗೆಯಲ್ಲಿರುವ ಕೂಡು ಮಂಗಳೂರು ರಾಮೇಶ್ವರ ಸಹಕಾರ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್‍ಕುಮಾರ್ ನೆರವೇರಿಸಿದರು. ಈ ಸಂದರ್ಭ ಉಪಾಧ್ಯಕ್ಷ ಟಿ.ಪಿ. ಹಮೀದ್ ಸಂಘದ ನಿರ್ದೇಶಕ ಎಸ್.ಎನ್. ರಾಜಾರಾವ್, ಕೆ.ಕೆ. ಭೋಗಪ್ಪ, ತಮ್ಮಣ್ಣೆಗೌಡ, ಲಕ್ಮಣರಾಜ ಅರಸ್, ರಮೇಶ್ ಸೇರಿದಂತೆ ಸಂಘದ ವ್ಯವಸ್ಥಾಪಕಿ ಮೀನಾ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು. ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ ನೆರವೇರಿಸಿದರು. ಸಿಬ್ಬಂದಿ ವರ್ಗದವರು ಹಾಜರಿದ್ದರು.ಎಸ್.ಕೆ.ಎಸ್.ಎಸ್.ಎಫ್. ಜಿಸಿಸಿ: ಎಸ್.ಕೆ.ಎಸ್.ಎಸ್.ಎಫ್. ಜಿಸಿಸಿ ಕೊಡಗು ಆಶ್ರಯದಲ್ಲಿ “ಸ್ವಾತಂತ್ರ್ಯ ಸರ್ವರಿಗೂ ಸಮಾನವಾಗಿರಲಿ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ಆನ್‍ಲೈನ್ ಕಾರ್ಯಕ್ರಮದ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಕೆ.ಎಸ್.ಎಸ್.ಎಫ್. ಕೊಡಗು ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಮಿಸ್ಬಾಹಿ ನೆರವೇರಿಸಿದರು. ಮುಖ್ಯ ಭಾಷಣಕಾರರಾಗಿ ಸುನ್ನೀ ಸಂದೇಶ ಮಾಸ ಪತ್ರಿಕೆಯ ಸಂಪಾದಕ ಕೆ.ಎಸ್. ಹೈದರ್ ದಾರಿಮಿ ಮಾತನಾಡಿದರು.

ಮುಂದಿನ ಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಉಳಿಸಿಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿಯಿದೆ ಎಂದರು. ಪ್ರಾಸ್ತಾವಿಕ ಭಾಷಣ ಮಾಡಿದ ಎಸ್‍ಕೆಎಸ್‍ಎಸ್‍ಎಫ್ ಕೊಡಗು ಜಿಲ್ಲಾಧ್ಯಕ್ಷ ತಮ್ಲೀಕ್ ದಾರಿಮಿ ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಎಚ್ಚರದಿಂದ ಉಪಯೋಗಿಸಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ಕೆಎಸ್‍ಎಸ್‍ಎಫ್ ಜಿಸಿಸಿ ಕೊಡಗು ಅಧ್ಯಕ್ಷ ಹುಸೈನ್ ಫೈಝಿ ವಹಿಸಿದ್ದರು. ಅಬ್ದುಲ್ ರಝಾಕ್ ಫೈಝಿ, ಶಿಹಾಬ್ ಆಲುಂಗಲ್ ಕ ಮಾಧ್ಯಮ ವಿಭಾಗ ಅಧ್ಯಕ್ಷ ಶಫೀಕ್ ನೆಲ್ಲಿಯಹುದಿಕೇರಿ ಹಾಗೂ ಎಸ್‍ಕೆಎಸ್‍ಎಸ್‍ಎಫ್ ಜಿಸಿಸಿ ಕೊಡಗು ಸಮಿತಿಯ ನಾಯಕರುಗಳು, ಸದಸ್ಯರುಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜೈನುದ್ದೀನ್ ಉಸ್ತಾದ್ ಪ್ರಾರ್ಥನೆ ನೆರವೇರಿಸಿ, ಅಬ್ದುಲ್ ರಜಾಕ್ ಬಜೆಗುಂಡಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ವಾಗತ ಕೋರಿದರು. ಅಬ್ದುಲ್ ಗಫೂರ್ ವಂದಿಸಿ, ಯಾಹ್ಯಾ ಕೊಡ್ಲಿಪೇಟೆ ಕಾರ್ಯಕ್ರಮ ನಿರೂಪಿಸಿದರು.ಕೂಡಿಗೆ ಡೈರಿ: ಕೂಡಿಗೆ ಡೈರಿಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಡೈರಿ ಮುಂಭಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲೆಯ ನಿರ್ದೇಶಕ ಕೆಕೆ. ಹೇಮಂತ್‍ಕುಮಾರ್ ನೆರವೇರಿಸಿದರು. ನಂತರ ದಿನದ ಮಹತ್ವದ ಬಗ್ಗೆ ಮಾತಾನಾಡಿದರು. ಈ ಸಂದರ್ಭ ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್ ಸೇರಿದಂತೆ ವಿವಿಧ ವಿಭಾಗದ ಅಧಿಕಾರಿ ವರ್ಗದವರು ಮತ್ತು ಸಿಬ್ಬಂದಿಗಳು ಹಾಜರಿದ್ದರು.

ಕೂಡಿಗೆ ಗ್ರಾಮ ಪಂಚಾಯಿತಿ: ಕೂಡಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಲ್ಪಾ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಸಿಬ್ಬಂದಿ ವರ್ಗದವರು ಇದ್ದರು.

ಸುಂಟಿಕೊಪ್ಪ ಪೊಲೀಸ್ ಠಾಣೆ: ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ವೆಂಕಟರಮಣ ಪೊಲೀಸ್ ಕವಾಯತ್‍ನೊಂದಿಗೆ ಧ್ವಜಾರೋಹಣ ನೇರವೇರಿಸಿದರು.

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಜೀವನ್ ಹಾಗೂ ಸಿಬ್ಬಂದಿಗಳು ನೇರವೇರಿಸಿದರು.

ಸರಕಾರಿ ಮಾದರಿ ಪ್ರಾಥಮಿಕ ಶಾಲೆ: ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಗೀತಾ ಪಾರ್ಥ ಹಾಗೂ ಸಹ ಶಿಕ್ಷಕರು ಧ್ವಜಾರೋಹಣ ನೇರವೇರಿಸಿದರು.

ಸರಕಾರಿ ಪ್ರೌಢಶಾಲೆ: ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಹಾಗೂ ಸಹ ಶಿಕ್ಷಕರು ಒಗ್ಗೂಡಿ ಧ್ವಜಾರೋಹಣ ನೇರವೇರಿಸಿದರು.ತಾಳತ್ತಮನೆ : ನೇತಾಜಿ ಯುವಕ ಹಾಗೂ ಯುವತಿ ಮಂಡಳಿ ತಾಳತ್ತಮನೆ ಇವರ ವತಿಯಿಂದ 74ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಹಿರಿಯರಾದ ಕೆ. ಪಿ. ಭಾಸ್ಕರ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಲಹೆಗಾರರು, ಸದಸ್ಯರು ಹಾಜರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಕಾರ್ಯದರ್ಶಿ ಬಿ.ಆರ್ ಯತೀಶ್ ರೈ ನೆರವೇರಿಸಿದರು. ಅತಿಥಿಗಳ ಭಾಷÀಣದ ನಂತರ ಗಿರೀಶ್ ತಾಳತ್ತಮನೆ ದಿನದ ಮಹತ್ವದ ಬಗ್ಗೆ ತಿಳಿಸಿದರು. ಅಧ್ಯಕ್ಷ ಸುದೀಪ್ ರೈ ವಂದಿಸಿದರು.