ಸುಂಟಿಕೊಪ್ಪ, ಆ. 24 : ಕಂಬಿಬಾಣೆಯ ಶ್ರೀರಾಮ ಹಾಗೂ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ರಕ್ಷಾ ಬಂಧನವನ್ನು ಆಚರಿಸಲಾಯಿತು.

ಕಂಬಿಬಾಣೆಯ ಶ್ರೀರಾಮ ಹಾಗೂ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಮಹೇಶ್ ದಿನದ ಮಹತ್ವ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭ ಅಯೋಧ್ಯಾ ಕರಸೇವೆಗೆ ತೆರಳಿದ್ದ ಕಂಬಿಬಾಣೆಯ ವಾಸುದೇವ್ ಮತ್ತು ಚಿದಾನಂದ ಅವರನ್ನು ಗೌರವಿಸಲಾಯಿತು.

ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಡಾ.ಶಶಿಕಾಂತ ರೈ, ಕೆ.ಎಸ್.ನಾರಾಯಣ ಭಟ್, ಮಾಜಿ ಅಧ್ಯಕ್ಷ ಜಯಂತ್, ಕಾರ್ಯದರ್ಶಿ ಜವಹರ್, ಬಜರಂಗದಳ ಅಧ್ಯಕ್ಷ ಪ್ರವೀಣ್, ಮಂಜುನಾಥ ರೈ, ಸಾಬು ಪಳಂಗಪ್ಪ ಹಾಗೂ ಭಕ್ತಾಧಿಗಳು ಇದ್ದರು.