ಗೋಣಿಕೊಪ್ಪಲು, ಆ.24: ಅಮ್ಮತ್ತಿ ದೇವಸ್ಥಾನ ಸಮಿತಿ ವತಿಯಿಂದ ಪಟ್ಟಣದ ಹೃದಯ ಭಾಗದ ನಾಲ್ಕು ದಿಕ್ಕುಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಅವರು ನೂತನ ಸಿಸಿ ಕ್ಯಾಮೆರಾಕ್ಕೆ ಚಾಲನೆ ನೀಡಿದರು.
ಬಸವೇಶ್ವರ ದೇವಸ್ಥಾನದ ಸಮಿತಿಯ ಅಧ್ಯಕ್ಷ ಮಾಚಿಮಂಡ ಮಧು ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿಯ ಉಪಾಧ್ಯಕ್ಷರಾದ ಪ್ರಿನ್ಸ್ ಗಣಪತಿ ಮಾತನಾಡಿ, ಸಾರ್ವಜನಿಕರ ದೇಣಿಗೆ ಹಣ ಹಾಗೂ ದೇವಸ್ಥಾನ ಸಮಿತಿಯ ಹಣವನ್ನು ಕ್ರೋಢೀಕರಿಸಿ ಎರಡು ಲಕ್ಷ ವೆಚ್ಚದಲ್ಲಿ ದೇವಾಲಯ ಆವರಣದಲ್ಲಿ ಹಾಗೂ ಪಟ್ಟಣದಲ್ಲಿ ಗುಣಮಟ್ಟದ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ ಎಂದರು.
ಬಿಜೆಪಿ ಪಕ್ಷದ ಮುಖಂಡ ಐನಂಡ ಜಪ್ಪು ಅಚ್ಚಪ್ಪ, ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಡಿಚಂಡ ಗಣಪತಿ, ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಮಾಚಿಮಂಡ ಸುವೀನ್ ಗಣಪತಿ, ಸ್ಥಳೀಯ ಠಾಣಾ ಪೊಲೀಸರು, ಊರಿನ ಮುಖಂಡರಾದ ಕುಟ್ಟಂಡ ಚಿಣ್ಣಪ್ಪ, ಮುಕ್ಕಾಟೀರ ಸಂತೋಷ್, ಮೊಳ್ಳೇರ ಹರ್ಷ, ಮಾಚಿಮಂಡ ಜಯ ಉತ್ತಪ್ಪ, ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು. ದೇವಾಲಯ ಸಮಿತಿಯ ಮುಕ್ಕಾಟೀರ ಬೋಪಣ್ಣ ಸ್ವಾಗತಿಸಿ, ಬಿದ್ದಂಡ ಕರುಂಬಯ್ಯ ವಂದಿಸಿದರು.