ಮಡಿಕೇರಿ, ಆ. 24 : ಜಿಲ್ಲೆಯಲ್ಲಿ ಹೊಸದಾಗಿ 3 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1220 ಪ್ರಕರಣಗಳು ವರದಿಯಾಗಿದ್ದು, 953 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 16 ಮಂದಿ ಸಾವನ್ನಪ್ಪಿದ್ದು, 251 ಪ್ರಕರಣಗಳು ಸಕ್ರಿಯವಾಗಿವೆ.ಕೋವಿಡ್ ಆಸ್ಪತ್ರೆಯಲ್ಲಿ 81 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 56 ಮಂದಿ, ಹೋಮ್ ಐಸೋಲೇಶನ್‍ನಲ್ಲಿ 114 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 260 ನಿಯಂತ್ರಿತ ವಲಯಗಳಿವೆ.ಹೊಸ ಪ್ರಕರಣಗಳ ವಿವರ ಮುಳ್ಳುಸೋಗೆ ಶ್ರೀನಿಧಿ ಬಡಾವಣೆಯ 23 ವರ್ಷದ ಮಹಿಳೆ, ಮಡಿಕೇರಿಯ ಗಣಪತಿ ಬೀದಿ ಬದ್ರಿಯಾ ಮೀನು ಅಂಗಡಿ ಬಳಿಯ 53 ವರ್ಷದ ಪುರುಷ ಹಾಗೂ ಮಡಿಕೇರಿಯ ವಾರ್ತಾ ಭವನ ಬಳಿಯ 80 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.