ವೀರಾಜಪೇಟೆ, ಆ. 24: ಇತ್ತಿಚಿಗೆ ಲಯನ್ಸ್ ಕ್ಲಬ್ ವೀರಾಜಪೇಟೆ ಹಾಗೂ ಕಾವೇರಿ ಪದವಿ ಮತ್ತು ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ‘ಹಸಿರು-ಮಡಿಲು’ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಪದವಿ ಕಾಲೇಜಿನ ಪ್ರ್ರಾಂಶುಪಾಲರಾದ ಡಾ.ಎ.ಎಸ್.ಪೂವಮ್ಮ ಸಸಿ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಂಶುಪಾಲರಾದ ಎನ್.ಎಮ್.ನಾಣಯ್ಯ ವನಮಹೋತ್ಸವದ ಕುರಿತು ಮಾತನಾಡಿದರು.
ಕ್ಲಬ್‍ನ ಅಧ್ಯಕ್ಷರಾದ ಲಯನ್ ಎ.ಪಿ.ಪ್ರಸನ್ನ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪುಷ್ಪರಾಜ್, ಕೋಶಾಧಿಕಾರಿ ಅಮ್ಮಣಿಚಂಡ ಪ್ರವೀಣ್, ವಲಯ ಸಲಹೆಗಾರರಾದ ಸುಬ್ರಮಣಿ.ಎ.ಪಿ, ಕ್ಲಬ್‍ನ ಸಂಪರ್ಕಾಧಿಕಾರಿ ಲಯನ್ ಗಿಲ್ ಸೋಮಯ್ಯ, ಕಾಲೇಜಿನ ಅಡಳಿತಾಧಿಕಾರಿ ಲತಾಕುಮಾರಿ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ಲಯನ್ಸ್ ಕ್ಲಬ್‍ನ ಹಸಿರು ಮಡಿಲು ಕಾರ್ಯಕ್ರಮದಡಿ ಹಣ್ಣಿÂನ ಸಸಿಗಳನ್ನು ವಿತರಿಸಲಾಯಿತು.