ಕೂಡಿಗೆ, ಆ. 24: ಕೂಡಿಗೆಯ ತೋಟಗಾರಿಕೆ ಕೃಷಿ ಕ್ಷೇತ್ರದ ಆವರಣ ದಲ್ಲಿ ತಾಲೂಕಿನ ರೈತರಿಗೆ ಅವರುಗಳ ಜಮೀನಿನ ಆಧಾರದ ಮೇಲೆ ಕಾಳುಮೆಣಸು ಗಿಡಗಳನ್ನು ವಿತರಣೆ ಮಾಡಲಾಗುತ್ತಿದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ ಜಿಲ್ಲಾ ಪಂಚಾಯತಿ ಸಹಕಾರದಲ್ಲಿ ಬೆಳೆಸಲಾದ ಒಂದು ಲಕ್ಷ ಕಾಳುಮೆಣಸು ಗಿಡಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ರೈತರಿಗೆ ಗಿಡಗಳನ್ನು ವಿತರಣೆ ಮಾಡುವ ಮೂಲಕ ಸೋಮವಾರಪೇಟೆ ತಾಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಎಸ್. ಶೋಭ ಚಾಲನೆ ನೀಡಿದರು. ಈ ಸಂದರ್ಭ ಕೂಡಿಗೆ ಕ್ಷೇತ್ರದ ಅಧಿಕಾರಿ ಎಸ್. ಆನಂದ ಸೇರಿದಂತೆ ಸಿಬ್ಬಂದಿ ವರ್ಗದವರು ಮತ್ತು ತಾಲೂಕಿನ ರೈತರು ಹಾಜರಿದ್ದರು.