ಕುಶಾಲನಗರ, ಆ. 21: ಕುಶಾಲನಗರದ ರೋಟರಿ ಸಂಸ್ಥೆ ವತಿಯಿಂದ ಬೈಲುಕೊಪ್ಪೆಯಲ್ಲಿ ಗಿಡ ನೆಡುವ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಹಲಸು, ಹೆಬ್ಬಲಸು, ಜಂಬು ನೇರಳೆ, ಬೇವು ಸೇರಿದಂತೆ ವಿವಿಧ ತಳಿಯ 3000 ಗಿಡಗಳನ್ನು ನೆಡುವ ಯೋಜನೆಯನ್ನು ರೋಟರಿ ಹಮ್ಮಿಕೊಂಡಿದೆ ಎಂದು ರೋಟರಿ ಅಧ್ಯಕ್ಷ ಕೆ.ಪಿ.ಚಂದ್ರಶೇಖರ್ ತಿಳಿಸಿದ್ದಾರೆ. ಮುಖ್ಯ ಅತಿಥಿಗಳಾಗಿ ಪಿರಿಯಾಪಟ್ಟಣದ ವಲಯ ಅರಣ್ಯಾಧಿಕಾರಿ ರತನ್ ಕುಮಾರ್, ರೋಟರಿ ಸಹಾಯಕ ಗವರ್ನರ್ ಪಿ.ಕೆ.ರವಿ, ಉದ್ಯಮಿ ಸುಬ್ರಮಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋಟರಿ ನಿಕಟ ಪೂರ್ವ ಅಧ್ಯಕ್ಷ ಎಂ.ಡಿ.ಅಶೋಕ, ಮಾಜಿ ಅಧ್ಯಕ್ಷರುಗಳಾದ ಪಿ.ಆರ್.ನವೀನ್, ಮಹೇಶ್ ನಾಲ್ವಡೆ, ಜೇಕಬ್, ಎಸ್.ಕೆ.ಸತೀಶ್, ಶೋಭಾ ಸತೀಶ್, ಕಾರ್ಯಕ್ರಮ ಸಂಯೋಜಕ ಎಂ.ಎಂ.ಪೆಮ್ಮಯ್ಯ, ಸದಸ್ಯರಾದ ಸಂತೋಷ್, ರವೀಂದ್ರ ವಿ. ರೈ, ಎಂ.ಡಿ.ರಂಗಸ್ವಾಮಿ ಮತ್ತಿತರರು ಇದ್ದರು.