ಸೋಮವಾರಪೇಟೆ,ಆ.21: ಜಿಲ್ಲಾ ಜಾನಪದ ಪರಿಷತ್‍ನ ಸೋಮವಾರ ಪೇಟೆ ಹೋಬಳಿ ಘಟಕದ ವತಿಯಿಂದ ಗೌರಿ ಹಬ್ಬದ ಅಂಗವಾಗಿ ಬಾಗಿನ ವಿತರಣೆ ಕಾರ್ಯಕ್ರಮ ನಡೆಯಿತು.
ಪಟ್ಟಣದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಬಳಿ ಘಟಕದ ಅಧ್ಯಕ್ಷ ಎಸ್.ಎ. ಮುರಳೀಧರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗ ವಹಿಸಿದ್ದ ಜೇಸೀ ಸಂಸ್ಥೆಯ ಪೂರ್ವ ವಲಯ ಉಪಾಧ್ಯಕ್ಷೆ ಮಮತ ಅವರು ಮಾತನಾಡಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ತಲೆಮಾರಿಗೂ ಹಸ್ತಾಂತರಿಸುವ ಕಾರ್ಯ ಆಗಬೇಕಿದೆ ಎಂದರು.
ಸಮಾಜದ ಎಲ್ಲಾ ರಂಗಗಳಲ್ಲೂ ಮಹಿಳೆಯರು ಸಾಧನೆ ತೋರುತ್ತಿದ್ದಾರೆ. ಸಾಮಾಜಿಕ, ರಾಜಕೀಯ ಸೇರಿದಂತೆ ಇತರ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುತ್ತಿ ದ್ದಾರೆ. ಇದರೊಂದಿಗೆ ಸಂಸ್ಕøತಿ-ಸಂಸ್ಕಾರಗಳನ್ನೂ ಅಳವಡಿಸಿಕೊಳ್ಳುವ ಮೂಲಕ ಸಾಂಪ್ರದಾಯಿಕ ಭವ್ಯ ಪರಂಪರೆಯನ್ನು ಎತ್ತಿಹಿಡಿಯಬೇಕು ಎಂದರು. ಮಕ್ಕಳಿಗೆ ಮನೆಯಿಂದಲೇ ಸಂಸ್ಕøತಿ ಕಲಿಸುವ ಕೆಲಸವನ್ನು ಮಾತೆಯಂದಿರು ಮಾಡಬೇಕು ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾ.ಪಂ. ಸದಸ್ಯೆ ಹೆಚ್.ಎನ್. ತಂಗಮ್ಮ, ಪ.ಪಂ. ಸದಸ್ಯೆ ನಳಿನಿ ಗಣೇಶ್, ಪರಿಷತ್‍ನ ಹೋಬಳಿ ನಿರ್ದೇಶಕ ಹಾಗೂ ಕಾರ್ಯಕ್ರಮ ಸಂಘಟಕರಾದ ಕೆ.ಎ. ಪ್ರಕಾಶ್ ಅವರುಗಳು ಮಾತನಾಡಿದರು.
ಗೌರಿ ಹಬ್ಬದ ಅಂಗವಾಗಿ ಪರಿಷತ್‍ನ ಮಹಿಳಾ ಸದಸ್ಯರು, ಸಾರ್ವಜನಿಕ ಮಹಿಳೆಯರಿಗೆ ಅರಶಿಣ ಕುಂಕುಮ, ಬಿಚ್ಚೋಲೆ, ಬಳೆಗಳನ್ನು ಒಳಗೊಂಡಂತೆ ಬಾಗಿನ ನೀಡ ಲಾಯಿತು. ಕಾರ್ಯಕ್ರಮದಲ್ಲಿ ಹೋಬಳಿ ಘಟಕದ ಉಪಾಧ್ಯಕ್ಷ ನ.ಲ. ವಿಜಯ, ಕಾರ್ಯದರ್ಶಿ ಎಂ.ಎ. ರುಬೀನಾ, ನಿರ್ದೇಶಕಿ ಜಲಾ ಕಾಳಪ್ಪ, ತಾಲೂಕು ಘಟಕದ ಉಪಾಧ್ಯಕ್ಷೆ ಸಂದ್ಯಾ ಕೃಷ್ಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.