ಗೋಣಿಕೊಪ್ಪಲು, ಆ. 20: ದ.ಕೊಡಗಿನಲ್ಲಿ ಕಾಡಾನೆಗಳು ಪ್ರತಿ ದಿನ ರೈತರ ಗದ್ದೆ ಗಳಿಗೆ, ಕಾಫಿ ತೋಟಗಳಿಗೆ ಲಗ್ಗೆ ಇಟ್ಟು ಹಾನಿ ಉಂಟುಮಾಡುತ್ತಿವೆ. ಇದೀಗ ಕಾಡಾನೆಗಳು ಹಸುವಿನ ಮೇಲೆ ದಾಳಿ ನಡೆಸಲು ಮುಂದಾಗಿವೆ.

ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಸಮೀಪದ ನಿವಾಸಿ ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪಿ.ಎ. ಅಜೀಜ್ ಅವರಿಗೆ ಸೇರಿದ ಹಸುವನ್ನು ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು. ಈ ಸಂದರ್ಭ ಮೂರು ಕಾಡಾನೆಗಳು ಗುಂಪೆÇಂದು ಮೇಯುತ್ತಿದ್ದ ಹಸುವನ್ನು ಕಂಡು ದಾಳಿ ನಡೆಸಿದೆ. ಕಾಡಾನೆಯ ದಾಳಿಯಿಂದ ಹಸುವಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಅಕ್ಕಪಕ್ಕದಲ್ಲಿದ್ದ ನಾಗರಿಕರು ಜೋರಾಗಿ ಕೂಗಿ ಕೊಂಡಾಗ ಕಾಡಾನೆಗಳು ಸ್ಥಳದಿಂದ ತೆರಳಿವೆ. ಹಸುವಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ. ಸುದ್ದಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.