ಶನಿವಾರಸಂತೆ, ಆ. 20: ಜಿಲ್ಲಾ ವೀರಶೈವ ಜಂಗಮ, ಅರ್ಚಕ ಮತ್ತು ಪುರೋಹಿತರ ಸಂಘ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ಸಹಭಾಗಿತ್ವದಲ್ಲಿ ತಾ. 25ರಂದು ಕೊಡ್ಲಿಪೇಟೆ -ಶನಿವಾರಸಂತೆ ಹೋಬಳಿಯಾದ್ಯಂತ ವಿವಿಧೆಡೆ ವೀರಭದ್ರೇಶ್ವರ ದೇವಾಲಯಗಳಲ್ಲಿ ಬಾದ್ರಪದ ಮಾಸದ ವೀರಭದ್ರೇಶ್ವರ ಜಯಂತ್ಯೋತ್ಸವ ಕೊಡ್ಲಿಪೇಟೆಯ ವೀರಭಧ್ರೇಶ್ವರ ದೇವಾಲಯಗಳಲ್ಲಿ ಬೆಳಿಗ್ಗೆ 9 ಗಂಟೆಗೆ ನೀರುಗುಂದ ದೇವಾಲಯಗಳಲ್ಲಿ 10, ಬೆಂಬಳೂರು ದೇವಾಲಯದಲ್ಲಿ 11, ಮುದ್ದಿನಕಟ್ಟೆ ಮಠದ ವೀರಭದ್ರೇಶ್ವರ ಸ್ವಾಮಿ ಗದ್ದಿಗೆಯಲ್ಲಿ 12, ಮನೆಹಳ್ಳಿ ಮಠದ ಗದ್ದಿಗೆಯಲ್ಲಿ ಮಧ್ಯಾಹ್ನ 1, ಗೌಡಳ್ಳಿ ದೇವಾಲಯದಲ್ಲಿ 2, ಕೋಟೆ ಊರು ದೇವಾಲಯದಲ್ಲಿ 3 ಹಾಗೂ ನೇರುಗಳಲೆ ದೇವಾಲಯದಲ್ಲಿ ಸಂಜೆ 4 ಗಂಟೆಗೆ ಪೂಜಾ ಕೈಂಕರ್ಯಗಳು ನಡೆಯಲಿದೆ.