ಪೆÇನ್ನಂಪೇಟೆ, ಆ. 20: ಪ್ರತಿ ವರ್ಷದ ಮಳೆಗಾಲದಲ್ಲಿ ಕೊಡಗಿನಲ್ಲಿ ಎದುರಾಗುವ ಪ್ರವಾಹ ಪರಿಸ್ಥಿತಿ ಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಪ್ರವಾಹದಿಂದಾಗಿ ಬೆಳೆ ಕಳೆದುಕೊಳ್ಳುವ ರೈತರಿಗೆ ಸರಕಾರ ದಿಂದ ನೀಡಲಾಗುವ ಪರಿಹಾರ ಮೊತ್ತವನ್ನು ಹೆಚ್ಚು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಥ್ಯು ಒತ್ತಾಯಿಸಿದ್ದಾರೆ
ಈ ಬಾರಿ ಉಂಟಾದ ಪ್ರವಾಹದಿಂದ ತತ್ತರಿಸಿದ ಲಕ್ಷ್ಮಣ ತೀರ್ಥ ನದಿ ದಂಡೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಎದುರಾದ ಪ್ರವಾಹದಿಂದ ಈ ಭಾಗದ ಜನತೆ ಮತ್ತು ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಸರಕಾರ ಈ ಬಗ್ಗೆ ಪೆÇನ್ನಂಪೇಟೆ, ಆ. 20: ಪ್ರತಿ ವರ್ಷದ ಮಳೆಗಾಲದಲ್ಲಿ ಕೊಡಗಿನಲ್ಲಿ ಎದುರಾಗುವ ಪ್ರವಾಹ ಪರಿಸ್ಥಿತಿ ಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಪ್ರವಾಹದಿಂದಾಗಿ ಬೆಳೆ ಕಳೆದುಕೊಳ್ಳುವ ರೈತರಿಗೆ ಸರಕಾರ ದಿಂದ ನೀಡಲಾಗುವ ಪರಿಹಾರ ಮೊತ್ತವನ್ನು ಹೆಚ್ಚು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಥ್ಯು ಒತ್ತಾಯಿಸಿದ್ದಾರೆ
ಈ ಬಾರಿ ಉಂಟಾದ ಪ್ರವಾಹದಿಂದ ತತ್ತರಿಸಿದ ಲಕ್ಷ್ಮಣ ತೀರ್ಥ ನದಿ ದಂಡೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಎದುರಾದ ಪ್ರವಾಹದಿಂದ ಈ ಭಾಗದ ಜನತೆ ಮತ್ತು ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಸರಕಾರ ಈ ಬಗ್ಗೆ ನೀರು ಪಾಲಾಗುತ್ತಿದೆ. ಈ ಕಾರಣಕ್ಕಾಗಿಯೇ ದಕ್ಷಿಣ ಕೊಡಗಿನಲ್ಲಿ ರೈತರು ಕೃಷಿಯಿಂದ ವಿಮುಖ ರಾಗುತ್ತಿದ್ದಾರೆ. ಕೃಷಿಯನ್ನೇ ಜೀವಾಳವಾಗಿಸಿಕೊಂಡಿರುವ ರೈತರು ಅತಿವೃಷ್ಟಿಯಿಂದ ತತ್ತರಿಸಿಹೋಗಿದ್ದಾರೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಅತಿವೃಷ್ಟಿಯಿಂದಾಗಿ ತೊಂದರೆ ಅನುಭವಿಸುವ ಸಂತ್ರಸ್ತ ಬೆಳಗಾರರಿಗೆ ನೀಡಲಾಗುವ ಪರಿಹಾರ ಧನ ಇಂದಿನ ಆರ್ಥಿಕ ಕಾಲಘಟ್ಟದಲ್ಲಿ ತುಂಬಾ ಕಡಿಮೆ ಮೊತ್ತವಾಗಿದೆ. ಹಲವು ವರ್ಷಗಳ ಹಿಂದೆ ಅಂದಿನ ಸರಕಾರ ಜಾರಿಗೆ ತಂದಿರುವ ಪರಿಹಾರ ಮಾರ್ಗಸೂಚಿಯನ್ನೇ ಇಂದಿಗೂ ಮುಂದುವರಿಸಲಾಗುತ್ತಿದೆ. ಅದ್ದರಿಂದ ಪ್ರಕೃತಿ ವಿಕೋಪ ಸಂಬಂಧಿತ ಪರಿಹಾರ ಧನದ ಮಾರ್ಗಸೂಚಿ ಯನ್ನು ಸರಕಾರ ಕೂಡಲೇ ಪರಿಷ್ಕರಿಸಿ ಪರಿಹಾರ ಧನದ ಮೊತ್ತವನ್ನು ಹೆಚ್ಚು ಮಾಡಬೇಕು ಎಂದರು.
ಪರಿಶೀಲನೆ ಸಂದರ್ಭದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿಯ ಗೋಣಿಕೊಪ್ಪಲು ಕ್ಷೇತ್ರದ ಸದಸ್ಯ ಸಿ.ಕೆ. ಬೋಪಣ್ಣ, ಬಾಳೆಲೆ ಕ್ಷೇತ್ರದ ತಾಲೂಕು ಪಂಚಾಯಿತಿ ಸದಸ್ಯೆ ಸುನಿತಾ, ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪೆÇೀರಂಗಡ ಪವನ್, ಬಾಳೆಲೆ ಹೋಬಳಿಯ ಉಪ ತಹಶೀಲ್ದಾರ್ ಮಂಜುನಾಥ್, ಗ್ರಾಮಲೆಕ್ಕಿಗ ಉಮೇಶ್ ಉಪಸ್ಥಿತರಿದ್ದರು.