ಸುಂಟಿಕೊಪ್ಪ, ಆ. 19: ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಸಂಘ (ಚಡ್ಡಿದೋಸ್ತ್)ದ ವತಿಯಿಂದ ಸೌಹಾರ್ದಯುತ ಷಟಲ್ ಬ್ಯಾಡ್ಮಿಂಟನ್ ಟೂರ್ನಿಯು ನಡೆಯಿತು. ಕೆದಕಲ್‍ನ 7ನೇ ಮೈಲು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಡಬಲ್ಸ್‍ನ ಫೈನಲ್ ಪಂದ್ಯದಲ್ಲಿ ವಿನೋದ್ ಮತ್ತು ಮಣಿ ಉತ್ತಮ ಆಟದಿಂದ ಮೋಹನ್, ಬಿ.ಆರ್. ಹರೀಶ್ ಅವರನ್ನು ಸೋಲಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಸಿಂಗಲ್ಸ್‍ನ ಪೈನಲ್ ಪಂದ್ಯದಲ್ಲಿ ಕೆ.ಎಂ. ವಿನೋದ್ ಮಣಿ ವಿರುದ್ಧ ಜಯಗಳಿಸಿದರು. ನವೀನ್ ಗೌಡ, ರಾಕೇಶ್, ಸುನಿಲ್, ಹರೀಶ್, ರಾಘವೇಂದ್ರ, ಶಶಿಂದ್ರ ಇತರರು ಇದ್ದರು.