ನಾಪೆÇೀಕ್ಲು, ಆ. 18: ಸಮೀಪದ ಯವಕಪಾಡಿ ಗ್ರಾಮದ ಕೇಟೋಳಿರ ಸನ್ನಿ ಸೋಮಣ್ಣ ಅವರ ಕಾಫಿ ತೋಟದಲ್ಲಿ ಗ್ರಾಮದ ಅಪ್ಪಾರಂಡ ಭವಾನಿ ಅವರಿಗೆ ಸೇರಿದ ಕರುವನ್ನು ಚಿರತೆ ಕೊಂದು ಹಾಕಿರುವ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿಂದ ಬೆಳೆಗಾರರು, ಕೃಷಿಕರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಚಿರತೆ ಧಾಳಿಯಿಂದ ಗ್ರಾಮದ ಜನ ಆತಂಕಕ್ಕೆ ಒಳಗಾಗಿದ್ದು, ಅರಣ್ಯ ಇಲಾಖೆ ಚಿರತೆಯನ್ನು ಹಿಡಿಯುವ ಅಥವಾ ಕಾಡಿಗಟ್ಟುವ ಕೆಲಸ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.