ವೀರಾಜಪೇಟೆ, ಆ. 19: ಈ ಬಾರಿ ಗೌರಿ-ಗಣೇಶೋತ್ಸವಕ್ಕೆ ಕೊರೊನಾ ಸಾಂಕ್ರಾಮಿಕ ವೈರಸ್ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಈಗಿನ ಭಾದ್ರಪದ ಮಾಸಕ್ಕಿಂತಲೂ ಮುಂದಿನ ವರ್ಷದ ಫೆಬ್ರವರಿ 15 ಹಾಗೂ 16ರಂದು ಮಾಘ ಮಾಸದಲ್ಲಿ ಆಚರಿಸುವುದು ಉತ್ತಮ ಎಂದು ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲ ವೀರಾಜಪೇಟೆಯ ಎನ್.ರವೀಂದ್ರನಾಥ್‍ಕಾಮತ್ ಸಲಹೆ ನೀಡಿದ್ದಾರೆ.

ಈ ತಿಂಗಳ 21-22ರಂದು ಗೌರಿ-ಗಣೇಶೋತ್ಸವದ ಆಚರಣೆಗೆ ಕೋವಿಡ್-19ನಂತೆ ಸರಕಾರ ನಿರ್ಬಂಧ ವಿಧಿಸಿದ್ದು ಇದರ ನಡುವೆ ಉತ್ಸವ ಆಚರಣೆ ಕಷ್ಟ ಸಾಧ್ಯವಾಗಲಿದೆ. ರಾಜ್ಯದ ವಿವಿಧೆಡೆಗಳಲ್ಲಿರುವ ಪ್ರಮುಖ ಜ್ಯೋತಿಷ್ಯಗಳ ಪ್ರಕಾರವು ಈ ಬಾರಿಯ ಉತ್ಸವ ಆಚರಣೆ ಮುಂದೂಡುವುದು ಒಳಿತ್ತೆಂದು ಅಭಿಪ್ರಾಯಪಟ್ಟಿದ್ದಾರೆ. ಗೋಕರ್ಣದ ವಿದ್ಯಾತೀರ್ಥ ಸ್ವಾಮೀಜಿ ಅವರು ಇದೇ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಈ ಬಾರಿಯ ಉತ್ಸವವನ್ನು ಮುಂದೂಡುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.