ಮಾಜಿ ಸೈನಿಕರ ಸಂಘ: ಸೋಮವಾರಪೇಟೆಯ ಜೈ ಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ಸಂಘದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಹಿರಿಯರಾದ ನಿವೃತ್ತ ಮೇಜರ್ ಮಂದಣ್ಣ ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ಈರಪ್ಪ, ಉಪಾಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಬಸಪ್ಪ, ಖಜಾಂಚಿ ಸುಕುಮಾರ್, ಮಾಚಯ್ಯ, ಕಾರ್ಯಪ್ಪ, ಮಹೇಶ್, ನವೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಸಾಪ-ಪತ್ರಕರ್ತರ ಸಂಘ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ನಗರ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕಸಾಪ ಭವನದ ಮುಂಭಾಗ ಧ್ವಜಾರೋಹಣ ನೆರವೇರಿಸಲಾಯಿತು.

ಕಸಾಪ ತಾಲೂಕು ಅಧ್ಯಕ್ಷ ಜವರ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಪದಾಧಿಕಾರಿಗಳಾದ ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಎಲ್.ಎಂ. ಪ್ರೇಮಾ, ಜಯೇಂದ್ರ, ವೀರರಾಜು, ಸಿ.ಕೆ. ಮಲ್ಲಪ್ಪ, ಜಲಾ ಕಾಳಪ್ಪ, ಶರ್ಮಿಳಾ ರಮೇಶ್, ಎಂ.ಎ. ರುಬೀನಾ, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್, ನಿರ್ದೇಶಕ ಕವನ್‍ಕಾರ್ಯಪ್ಪ, ಇಂದ್ರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಸಹಕಾರ ಸಂಘದಲ್ಲಿ: ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕಾಫಿ ಮಂಡಳಿಯ ಸಹಯೋಗದೊಂದಿಗೆ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಸಂಘದ ಅಧ್ಯಕ್ಷ ಹೆಚ್.ಕೆ. ಮಾದಪ್ಪ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಬಿ.ಎಂ. ಈಶ್ವರ್ ಹಾಗೂ ಆಡಳಿತ ಮಂಡಳಿ ಸದಸ್ಯರುಗಳು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಹಾಗೂ ಸಿಬ್ಬಂದಿ ವರ್ಗ, ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರುಳೀಧರ್ ಮತ್ತು ಕಾಫಿ ಮಂಡಳಿ ಕಚೇರಿ ಸಿಬ್ಬಂದಿ ವರ್ಗದವರು, ನಿವೃತ್ತ ಯೋಧ ತಮ್ಮಯ್ಯ ಹಾಜರಿದ್ದರು.

ಐಗೂರಿನಲ್ಲಿ: ಐಗೂರು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಪ್ರಭಾರ ಪ್ರಾಂಶುಪಾಲ ಉಮೇಶ್, ಮುಖ್ಯೋಪಾಧ್ಯಾಯ ಯಶ್ವಂತ್ ಸೇರಿದಂತೆ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.ಕಲ್ಕಂದೂರು: ಓಡಿಪಿ ಸಂಸ್ಥೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕಂದೂರಿನಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಓಡಿಪಿ ಕಾರ್ಯಕರ್ತ ಕೆ.ಎಲ್. ದೀಕ್ಷಿತ್, ಸಮಿತಿಯ ಅಧ್ಯಕ್ಷ ರಾಜು, ಸದಸ್ಯರಾದ ನಾಗರಾಜು, ಪ್ರಸಾದ, ಮೀರಾ, ವನಜಾಕ್ಷಿ, ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸಂಯೋಜಕ ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪಟ್ಟಣ ಸಹಕಾರ ಬ್ಯಾಂಕ್: ಮಡಿಕೇರಿಯ ಪಟ್ಟಣ ಸಹಕಾರ ಬ್ಯಾಂಕ್‍ನಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು, ಅಧ್ಯಕ್ಷ ಸಿ.ಕೆ. ಬಾಲಕೃಷ್ಣ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಉಪಾಧ್ಯಕ್ಷ ಬಿ.ಎಂ. ರಾಜು ಹಾಗೂ ನಿರ್ದೇಶಕರುಗಳಾದ ಬಿ.ಕೆ. ಜಗದೀಶ್, ಕೋಡಿ ಚಂದ್ರಶೇಖರ್, ಎಸ್.ಸಿ. ಸತೀಶ್, ಕನ್ನಂಡ ಸಂಪತ್, ಬಿ.ಪಿ. ಮಾಚಮ್ಮ, ಆರ್. ಗಿರೀಶ್, ಕೆ.ಆರ್. ನಾಗೇಶ್, ಬಿ.ವಿ. ರೋಷನ್, ವ್ಯವಸ್ಥಾಪಕ ಕೆ. ಪದ್ಮನಾಭ ಕಿಣಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ದಿನದ ಮಹತ್ವದ ಕುರಿತು ಕೋಡಿ ಚಂದ್ರಶೇಖರ್ ಮಾತನಾಡಿದರು.

ಪಾಲೆಮಾಡು ಅಂಬೇಡ್ಕರ್ ಯುವಕ ಸಂಘ: ಪಾಲೆಮಾಡುವಿನಲ್ಲಿ ಅಂಬೇಡ್ಕರ್ ಯುವಕ ಸಂಘ ಹಾಗೂ ಗ್ರಾಮದ ನಿವಾಸಿಗಳಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಆಚರಿಸಲಾಯಿತು.

ಗ್ರಾ.ಪಂ. ಪಿಡಿಒ ಅಬ್ದುಲ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಭಾತೃತ್ವ, ಸಮಾನತೆಯಿಂದ ಕೂಡಿದ ದೇಶ ನಮ್ಮದು, ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಹಲವಾರು ದಾರ್ಶನಿಕರ ಫಲವಾಗಿ ನಾವು ಇಂದು ಸ್ವತಂತ್ರರಾಗಿದ್ದೇವೆ ಎಂದರು.

ಗ್ರಾಮದ ಮುಖ್ಯಸ್ಥ ಹಾಗೂ ಭೂಮಿ ಮತ್ತು ವಸತಿ ಹೋರಾಟಗಾರರ ಸಮಿತಿಯ ರಾಜ್ಯ ಕಾರ್ಯದರ್ಶಿ ಮೊಣ್ಣಪ್ಪ, ಹೊಟೆಕಾಡು ಪ್ರಾಥಮಿಕ ಶಾಲೆಯ ಶಿಕ್ಷಕಿ ಸೌಮ್ಯ ಹಾಗೂ ಶಿಕ್ಷಕ ಕುಮಾರ ಸ್ವಾಮಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ 15 ವಿದ್ಯಾರ್ಥಿಗಳಿಗೆ ಸಂವಿಧಾನದ ಪುಸ್ತಕ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು 6ನೇ ತರಗತಿ ವಿದ್ಯಾರ್ಥಿ ಸಫಾ ಫಾತಿಮ ಅವರ ಭಾಷಣದ ಮೂಲಕ ಮುಕ್ತಾಯಗೊಳಿಸಲಾಯಿತು. ಗ್ರಾ.ಪಂ. ಮಾಜಿ ಸದಸ್ಯೆ ಕುಸುಮ, ಪೊಲೀಸ್ ಸಿಬ್ಬಂದಿ ರಾಜೇಶ್, ಜಯನ್, ಧರ್ಮಸ್ಥಳ ಸಂಘದ ಕಾವೇರಿ, ಗ್ರಾಮದ ಹಿರಿಯ ಹೋರಾಟಗಾರ ಸುರೇಶ್, ಜಾಜು ಮತ್ತು ಅಂಬೇಡ್ಕರ್ ಯುವಕ ಸಂಘದ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಇದ್ದರು.

ನಾಪೆÇೀಕ್ಲು: ಸಮೀಪದ ಕುಂಜಿಲ ಅಂಬಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 74ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸ್ಥಳೀಯರಾದ ಬಾಚಮಂಡ ಕಸ್ತೂರಿ ಪೂವಪ್ಪ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ನಂಬಡಮಂಡ ಪೂವಮ್ಮ, ಅತಿಥಿ ಶಿಕ್ಷಕಿ ರೋಸಿ, ಶಿಕ್ಷಕಿ ಪಾರ್ವತಿ ಇದ್ದರು. ಈ ಸಂದರ್ಭ ಬಾಚಮಂಡ ಕಸ್ತೂರಿ ಪೂವಪ್ಪ ಅವರು ರೂ. 1000 ಶಾಲೆಗೆ ದತ್ತಿನಿಧಿಯಾಗಿ ನೀಡಿದರು.ಮಡಿಕೇರಿ ಎಪಿಎಂಸಿ: ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಮಿತಿ ಅಧ್ಯಕ್ಷ ಬೆಪ್ಪುರನ ಮೇದಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಪ್ರಸ್ತುತ ಕೊಡಗು ಜಿಲ್ಲೆಯನ್ನು ಭಾದಿಸುತ್ತಿರುವ ಪ್ರವಾಹದಂತಹ ಪ್ರಕೃತಿ ವಿಕೋಪ ಮತು ್ತಕೊರೊನಾ ಭೀತಿಯಿಂದ ನಾಡಿನ ಜನರನ್ನು ರಕ್ಷಿಸಲು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ವಾಂಚೀರ ಜಯ ನಂಜಪ್ಪ, ಸದಸ್ಯರಾದ ಕಾಂಗೀರ ಸತೀಶ್, ಅಂಬಿ ಕಾರ್ಯಪ್ಪ, ಆಯಪಂಡ ತಮ್ಮಯ್ಯ, ಹೇಮಲತ ನಂಜಪ್ಪ, ಸಮಿತಿಯ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.

ಕಡಂಗ ಆಟೋ ಚಾಲಕರ ಸಂಘ: ಕಡಂಗ ಆಟೋ ಚಾಲಕರ ಸಂಘದ ವತಿಯಿಂದ 74ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಕಡಂಗ ಆಟೋ ನಿಲ್ದಾಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಆಟೋ ಚಾಲಕರ ಸಂಘದ ಅಧ್ಯಕ್ಷ ಚೋಳಂಡ ಸುಗುಣ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಧ್ವಜಾರೋಹಣವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ವಿಎಸ್‍ಎಸ್‍ಎನ್ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ನಿರ್ವಹಿಸಿದರು. ಈ ಸಂದರ್ಭ ಮಾತನಾಡಿದ ತಮ್ಮಯ್ಯ, ಭಾರತ ಆಧುನಿಕತೆಯಲ್ಲಿ ವಿಶ್ವದ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತ ಶತ್ರು ದೇಶಗಳನ್ನು ಹಿಮ್ಮೆಟ್ಟಿಸುವ ಎಲ್ಲಾ ತಂತ್ರ ಮತ್ತು ಆಯುಧಗಳನ್ನು ಒಳಗೊಂಡಿದೆ ಎಂದರು.

ಕಿರಣ ಕಾರ್ಯಪ್ಪ ಮಾತನಾಡಿ, ಕೊರೊನಾ ವಾರಿಯರ್ಸ್‍ಗಳ ಕೆಲಸ ಕಾರ್ಯಗಳನ್ನು ಸ್ವಾಗತಿಸಿದರು. ಈ ಸಂದರ್ಭ ಆಟೋ ಚಾಲಕರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಆಟೋ ಚಾಲಕ ಸಂಘದ ಉಪಾಧ್ಯಕ್ಷ ಹಂಸ, ಚಾಲಕರಾದ ನಾಗರಾಜು, ಅಶೋಕ, ಇಸ್ಮಾಯಿಲ್, ಗಣಪತಿ, ಮಂಜು, ಅಚ್ಚಾವು, ಆಶಿಫ್, ರಫೀಕ್, ಸಿದ್ದಿಕ್, ಜಬ್ಬಾರ್, ಮಿಥುನ್, ಕಿಲಕ, ಶಕೀರ್ ಹಾಜರಿದ್ದರು.

ಕೆ.ಎಂ.ಟಿ. ಸಮೂಹ ವಿದ್ಯಾಸಂಸ್ಥೆ: ಕುಶಾಲನಗರ ಕೆ.ಎಂ.ಟಿ. ಸಮೂಹ ವಿದ್ಯಾಸಂಸ್ಥೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಲಯನ್ಸ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಪೊನ್ನಚ್ಚನ ಮೋಹನ್ ಧ್ವಜಾರೋಹಣ ನೆರವೇರಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಕಾನೆಹಿತ್ಲು ಸತೀಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಕಾರ್ಯದರ್ಶಿ ಕವಿತಾ ಮೋಹನ್, ಕಾರ್ಯದರ್ಶಿ ಸುನಿಲ್, ಲಯನ್ಸ್ ಸದಸ್ಯರು ಮತ್ತು ಕೆ.ಎಂ.ಟಿ. ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಹಾಜರಿದ್ದರು.

ಶಾಫಿ ಮುಸ್ಲಿಂ ಜಮಾಅತ್: 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗೋಣಿಕೊಪ್ಪಲುವಿನ ಶಾಫಿ ಮುಸ್ಲಿಂ ಜಮಾಅತ್ ಮಸೀದಿಯ ಆವರಣದಲ್ಲಿ ಪ್ರಧಾನ ಕಾರ್ಯದರ್ಶಿ ಹಕೀಮ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಸಮಿತಿ ಉಪಾಧ್ಯಕ್ಷ ಎಂ.ಹೆಚ್. ನಾಸರ್, ಖಜಾಂಚಿ ಅಬ್ದುಲ್ ಸಲಾಂ, ಮಸೀದಿ ಗುರುಗಳಾದ ಖಾದರ್, ಉಸ್ತಾದ್ ಎಂ.ಸಿ. ಅಶ್ರಫ್, ಎಸ್.ಕೆ.ಎಸ್‍ಎಸ್‍ಎಫ್ ಕಾರ್ಯದರ್ಶಿ ಎಂ.ಕೆ. ಅಶ್ರಫ್, ಕಮಿಟಿ ಸದಸ್ಯರಾದ ಇಬ್ರಾಹಿಂ, ಕೆ.ಪಿ. ಮೊಹಿದ್ದೀನ್, ರಹೀಮ್, ಮಜೀದ್, ಬಾಖವಿ ಸೇರಿದಂತೆ ಇನ್ನಿತರರು ಹಾಜರಿದ್ದರು. ನೂರುಲ್ ಹುದಾ ಮದರಸ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.ಮಸ್ಜಿದ್-ಧಾರ್ಮಿಕ ಸಂಘಟನೆ: ಕಡಂಗ ಸಮೀಪದ ಮುಹಿಯುದ್ದೀನ್ ಮಸೀದಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಮತ್ತು ಧಾರ್ಮಿಕ ಸಂಘಟನೆಗಳ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಸ್ವಾತಂತ್ರ್ಯ ದಿನದ ಪ್ರಯುಕ್ತ ಹ್ಯಾಂಡ್‍ಪೆÇೀಸ್ಟ್‍ನಲ್ಲಿರುವ ಮಸ್ಜಿದ್ ಮುಂಭಾಗ ಆಡಳಿತ ಮಂಡಳಿ ಅಧ್ಯಕ್ಷ ಇಸಾಕ್ ಸಿ.ಈ. ಧ್ವಜಾರೋಹಣ ಮಾಡಿದರು. ಧರ್ಮಗುರುಗಳಾದ ಹಮೀದ್ ದಾರಿಮಿ ಸ್ವಾತಂತ್ರ್ಯ ದಿನದ ಪ್ರಯುಕ್ತ ಸಂದೇಶ ಭಾಷಣ ಮಾಡಿದರು.

ನಂತರ ಮುಹಿಯದ್ಧಿನ್ ಜುಮಾ ಮಸೀದಿಯಲ್ಲಿ ಧ್ವಜಾರೋಹಣ ಮಾಡಿ ಪ್ರತಿಜ್ಞಾವಿಧಿ ಭೋದಿಸುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ವಿಖಾಯ ವಿಂಗ್‍ನ ಕಾರ್ಯಕರ್ತರು ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭ ಮಸೀದಿ ಆಡಳಿತ ಮಂಡಳಿ ಸದಸ್ಯರು, ಜಮಾಆತ್ ಸದಸ್ಯರು, ಧಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರಾದ ಇಕ್ಬಾಲ್, ಸಮದ್, ಶಕೀರ್, ಸಂಶು, ಸುಧೀರ್ ಮತ್ತು ಕೆಲ ವಿದ್ಯಾರ್ಥಿಗಳು ಹಾಜರಿದ್ದರು.

ಕುಶಾಲನಗರ ರೋಟರಿ: ಕುಶಾಲನಗರ ರೋಟರಿ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ರೋಟರಿ ಅಧ್ಯಕ್ಷ ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸಿದರು.

ಆಚರಿಸಲಾಯಿತು. ವಿಖಾಯ ವಿಂಗ್‍ನ ಕಾರ್ಯಕರ್ತರು ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭ ಮಸೀದಿ ಆಡಳಿತ ಮಂಡಳಿ ಸದಸ್ಯರು, ಜಮಾಆತ್ ಸದಸ್ಯರು, ಧಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರಾದ ಇಕ್ಬಾಲ್, ಸಮದ್, ಶಕೀರ್, ಸಂಶು, ಸುಧೀರ್ ಮತ್ತು ಕೆಲ ವಿದ್ಯಾರ್ಥಿಗಳು ಹಾಜರಿದ್ದರು.

ಕುಶಾಲನಗರ ರೋಟರಿ: ಕುಶಾಲನಗರ ರೋಟರಿ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ರೋಟರಿ ಅಧ್ಯಕ್ಷ ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸಿದರು.

ಒಬಿಸಿ ಮೋರ್ಚಾದ ಮಾಜಿ ಅಧ್ಯಕ್ಷ ಬಿ.ಎಸ್. ರಾಜ ಬಿಜೆಪಿ ನಗರ ಒಬಿಸಿ ಅಧ್ಯಕ್ಷ ಸತೀಶ್ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಸುರೇಶ್ ರೈ, ನೂರೇರ ರಂಜಿ, ತಾಲೂಕು ಉಪಾಧ್ಯಕ್ಷ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ನವೀನ್ ಸೇರಿದಂತೆ ತಾಲೂಕು ಪದಾಧಿಕಾರಿಗಳು ಹಾಜರಿದ್ದರು.

ಇಒ ಕಚೇರಿ ಗೋಣಿಕೊಪ್ಪಲು: ವೀರಾಜಪೇಟೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲೀರ ಚಲನ್‍ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಪೊನ್ನಂಪೇಟೆಯ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಷಣ್ಮುಗಂ, ತಾಲೂಕು ಪಂಚಾಯಿತಿಯ ಸಿಬ್ಬಂದಿಗಳು ಹಾಜರಿದ್ದರು.ಗೋಣಿಕೊಪ್ಪಲು: ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕÀದ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆ ಸರಳವಾಗಿ ನೆರವೇರಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಕುಸುಮಾದರ್, ಇವತ್ತು ದೇಶ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿ ಮುನ್ನಡೆಯುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ದೇಶ ಸ್ವಾವಲಂಬನೆಯತ್ತ ಸಾಗುತ್ತಿದೆ ಎಂದರು. ಪ್ರೊ. ಮಾದಯ್ಯ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಲೆಫ್ಟಿನೆಂಟ್ ಅಕ್ರಮ್, ಎನ್.ಎಸ್.ಎಸ್. ಅಧಿಕಾರಗಳಾದ ವನೀತ್‍ಕುಮಾರ್, ರೀಟಾ, ಕಾಲೇಜಿನ ಅಧ್ಯಕ್ಷರುಗಳಾದ ಸೋಮನಾಥ್, ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಸ್ವಯಂಸೇವಕರು ಪಾಲ್ಗೊಂಡಿದ್ದರು.

ಪೊನ್ನಂಪೇಟೆ-ಪೊಲೀಸ್ ಠಾಣೆ: 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪೊನ್ನಂಪೇಟೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಡಿ. ಕುಮಾರ್ ಮುಂದಾಳತ್ವದಲ್ಲಿ ಆಚರಿಸಲಾಯಿತು. ಪೊಲೀಸ್ ಸಿಬ್ಬಂದಿಗಳು ಸಮವಸ್ತ್ರ ಧರಿಸಿ ಧ್ವಜಾವಂದನೆ ಸ್ವೀಕರಿಸಿ, ರಾಷ್ಟ್ರಗೀತೆ ಹಾಡಿದರು. ಈ ಸಂದರ್ಭ ಠಾಣೆಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಾಂತಿನಿಕೇತನ ಯುವಕ ಸಂಘ: 74ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಮತ್ತು ಸಸಿ ನೆಡುವ ಕಾರ್ಯಕ್ರಮ ಶಾಂತಿನಿಕೇತನ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಯಿತು.

ಸಂಘದ ಅಧ್ಯಕ್ಷ ಚೇತನ್, ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್, ಶಕ್ತಿ ಪತ್ರಿಕೆಯ ಸಹ ಸಂಪಾದಕ ಚಿ.ನಾ. ಸೋಮೇಶ್ ಭಾಗಿಯಾಗಿದ್ದರು.

ಕಲ್ಲುಗುಂಡಿ: ಸ್ಪಾರ್ಟ್ ಕಂಪ್ಯೂಟರ್ ಕಲಿಕಾ ಕೇಂದ್ರ ಹಾಗೂ ಕೆನರಾ ಬ್ಯಾಂಕ್ ಮತ್ತು ಚರ್ಚ್ ಬಿಲ್ಡಿಂಗ್‍ನಲ್ಲಿರುವ ಸಂಸ್ಥೆಗಳು ಇದರ ಆಶ್ರಯದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ನಿತಿನ್ ಎನ್.ಡಿ., ಹವಲ್ದಾರರು, ಭಾರತೀಯ ಭೂ ಸೇನೆ ಇವರು ನೆರವೇರಿಸಿದರು. ಧ್ವಜಾರೋಹಣ ಕಾರ್ಯಕ್ರಮ ದಲ್ಲಿ ಚರ್ಚ್ ಬಿಲ್ಡಿಂಗ್‍ನಲ್ಲಿರುವ ಸಂಸ್ಥೆಗಳ ಮಾಲೀಕರು, ನಿರ್ದೇಶಕರು, ಸಿಬ್ಬಂದಿವರ್ಗ, ಸ್ಪಾಟ್ ಕಂಪ್ಯೂಟರ್ ಕಲಿಕಾ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಕೆನರಾ ಬ್ಯಾಂಕಿನ ಪ್ರಬಂಧಕಿ ರಾಜೀವಿ ಭಾಗವಹಿಸಿದ್ದರು.