ಸಿ.ಎನ್.ಸಿ. ಮಡಿಕೇರಿ: ಭಾರತದ ರಾಷ್ಟ್ರೀಯ ತಿರಂಗ ಧ್ವಜಾರೋಹಣದ ಮೂಲಕ ರಾಷ್ಟ್ರಗೀತೆಯೊಂದಿಗೆ ಸಿ.ಎನ್.ಸಿ. (ಕೊಡವ ನ್ಯಾಷನಲ್ ಕೌನ್ಸಿಲ್) ಮಡಿಕೇರಿಯ ಮಿಡ್ಲ್ ಗ್ರೌಂಡ್ಸ್ ಮಂದ್‍ನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಎನ್.ಯು. ನಾಚಪ್ಪ ನೇತೃತ್ವದಲ್ಲಿ ಆಚರಿಸಲಾಯಿತು.

ಧ್ವಜಾರೋಹಣದ ನಂತರ ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಮಾತನಾಡಿ, ಇಂದು ಕೊಡವ ಬುಡಕಟ್ಟು ಕುಲ ಆದಮ್ಯ ರಾಷ್ಟ್ರೀಯತೆ ಮತ್ತು ಅಪ್ರತಿಮ ದೇಶಭಕ್ತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕಲಿಯಂಡ ಪ್ರಕಾಶ್, ಕಲಿಯಂಡ ಮೀನಾ ಪ್ರಕಾಶ್, ಚಂಬಂಡ ಜನತ್ ಕುಮಾರ್, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ಅಯ್ಯಣ್ಣ, ಮನೋಟಿರ ಚಿಣ್ಣಪ್ಪ, ಪುಟ್ಟಿಚಂಡ ಡಾನ್ ದೇವಯ್ಯ, ಭಾಗವಹಿಸಿದ್ದರು.

*ಕೊಡ್ಲಿಪೇಟೆ ರೋಟರಿ: ಕೊಡ್ಲಿಪೇಟೆಯ ಹೇಮಾವತಿ ರೋಟರಿ ವತಿಯಿಂದ ಸ್ವಾತಂತ್ರ್ಯ ದಿನದ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಸಮೀಪದ ಎಸ್.ಕೆ.ಎಸ್. ಕಲ್ಲುಮಠ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವ್ಯೆದ್ಯರಾದ ರೊಟೇರಿಯನ್ ಡಾ. ಉದಯ್ ಕುಮಾರ್ ಧ್ವಜಾರೋಹಣ ನೆರವೇರಿಸಿ ಗಿಡ ನೆಡುವ ಮೂಲಕ ವನ ಮಹೋತ್ಸವಕ್ಕೆ ಚಾಲನೆ ನೀಡಿದರು.

ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ರೋಟರಿ ಅಧ್ಯಕ್ಷ ಹೆಚ್.ಎಂ. ದಿವಾಕರ್, ಕಾರ್ಯದರ್ಶಿ ಅಮೃತ್ ಕುಮಾರ್, ಸದಸ್ಯರುಗಳಾದ ಯತೀಶ್ ಬಿ.ಕೆ., ದಿನೇಶ್, ಚಿಕ್ಕವೀರರಾಜು, ಲೋಕೇಶ್, ಯು.ಹೆಚ್. ದುಶ್ಯಂಥ್, ಸುಬ್ರಮಣ್ಯಾಚಾರ್ ಸೇರಿದಂತೆ ಸದಸ್ಯರುಗಳು, ಶಾಲೆಯ ಶಿಕ್ಷಕರುಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.

ಮಡಿಕೇರಿ ನಗರ ಬಿ.ಜೆ.ಪಿ. ಕಚೇರಿ: ನಗರ ಬಿ.ಜೆ.ಪಿ. ಕಚೇರಿಯಲ್ಲಿ 74ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ನಗರ ಬಿ.ಜೆ.ಪಿ. ಅಧ್ಯಕ್ಷ ಮನು ಮಂಜುನಾಥ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಪಕ್ಷದ ಜಿಲ್ಲಾ ವಕ್ತಾರ ಮಹೇಶ್ ಜೈನಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ರಾಖೇಶ್, ನಗರ ಪ್ರಧಾನ ಕಾರ್ಯದರ್ಶಿ ಅಪ್ಪಣ್ಣ, ನಗರ ಕಾರ್ಯಾಲಯ ಕಾರ್ಯದರ್ಶಿ ಬಿ.ಜೆ. ಜಗದೀಶ್, ಜಿಲ್ಲಾ ಕಾರ್ಯದರ್ಶಿ ಸತೀಶ್, ಹಿಂದುಳಿದ ಮೋರ್ಚಾ ನಗರಾಧ್ಯಕ್ಷ ಬಿ.ಎಂ. ರಾಜೇಶ್, ನಗರ ಉಪಾಧ್ಯಕ್ಷ ಡಿಶು, ನಗರಸಭಾ ಮಾಜಿ ಸದಸ್ಯ ಕೆ.ಎಸ್. ರಮೇಶ್, ನಗರ ಖಜಾಂಚಿ ಮುರುಗನ್ ಹಾಗೂ ಪಕ್ಷದ ಕಾರ್ಯಕರ್ತರಾದ ಕನ್ನಿಕೆ, ಶ್ವೇತಾ, ಗೌರಮ್ಮ, ಶ್ರೇಯಾಂಕ್, ವೇಣು, ಕಲಾವತಿ, ರೆಜಿ, ನಾಗೇಶ್, ಗಣೇಶ್ ಮುಂತಾದವರು ಪಾಲ್ಗೊಂಡಿದ್ದರು.

ಮಾದಾಪುರ: ಮಾದಾಪುರ ಗ್ರಾಮ ಪಂಚಾಯಿತಿ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಷ್ಟ್ರ ಧ್ವಜಾರೋಹಣದೊಂದಿಗೆ ಆಚರಿಸಲಾಯಿತು. ಅಲ್ಲದೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಬಡಾವಣೆಯಲ್ಲಿಯೂ ಧ್ವಜಾರೋಹಣದೊಂದಿಗೆ ಸ್ವಾತಂತ್ರ್ಯೋತ್ಸವ ನೆರವೇರಿತು.

ಜಂಬೂರುವಿನ ಶ್ರೀ ಜೋಡು ಬಸವೇಶ್ವರ ದೇವಾಲಯ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಈ ಪ್ರಯುಕ್ತ ಸಸಿಗಳನ್ನು ನೆಡಲಾಯಿತು. ಜಂಬೂರು ಬಾಣೆಯ ಕೆರೆ ತಟದಲ್ಲಿ ಗ್ರಾಮಸ್ಥರು ಶ್ರಮದಾನದೊಂದಿಗೆ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಶ್ರಮದಾನದಲ್ಲಿ ಪಾಲ್ಗೊಂಡರು. ಗ್ರಾ.ಪಂ. ಮಾಜಿ ಸದಸ್ಯ ಮಜೀದ್, ಊರಿನ ಪ್ರಮುಖ ಮೋಹನ್, ದೇವಾಲಯ ಸಮಿತಿಯ ಪಿ.ಎಸ್. ರಿನೇಶ್ ಹಾಗೂ ಕೃಷಿ ಸಹಾಯಕ ಪಿ.ಎಸ್. ಬೋಪಯ್ಯ, ಕಾವೇರಪ್ಪ, ಮಂಜು, ಲೋಕೇಶ್ ಮೊದಲಾದವರು ನೇತೃತ್ವ ವಹಿಸಿದ್ದರು.ಲಯನ್ಸ್ ಸಂಸ್ಥೆ ಮಡಿಕೇರಿ: ಮಡಿಕೇರಿಯ ಲಯನ್ಸ್ ಸಂಸ್ಥೆ ವತಿಯಿಂದ ನಗರದ ಎ.ವಿ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಸಂಸ್ಥೆಯ ಪದಾಧಿಕಾರಿಗಳು, ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

ಜ್ಞಾನ ವಿಕಾಸ ಶಾಲೆ: ಸೋಮವಾರಪೇಟೆಯ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ ಅವರು ಧ್ವಜಾರೋಹಣ ಮಾಡಿದರು.

ಈ ಸಂದರ್ಭ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಟೇಶ್ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಅಮ್ಮತ್ತಿ: ಅಮ್ಮತ್ತಿ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ನಾಡಿನ ಕೊರೊನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ಕಳೆದ ನಲ್ವತ್ತು ವರ್ಷಗಳಿಂದ ಅಮ್ಮತ್ತಿ ನಾಡಿನಲ್ಲಿ ಚಿಕಿತ್ಸೆ ನೀಡುತ್ತಿರುವ ಡಾ. ಬೋಪಣ್ಣ ಅವರನ್ನೂ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಅಮ್ಮತ್ತಿ ಪೆÇಲೀಸ್ ಠಾಣಾಧಿಕಾರಿ ಜೋಯಪ್ಪ ಧ್ವಜಾರೋಹಣ ಮಾಡಿದರು. ಕಾರ್ಯಕ್ರಮವನ್ನು ಅಭಿಜಿತ್ ನಿರೂಪಿಸಿದರು. ಈ ಸಂದರ್ಭ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಪ್ರಮುಖರಾದ ದೊಂಬಯ್ಯ, ಅಗಸ್ಟಿನ್, ಶ್ರೀಜು, ರಿಚಾರ್ಡ್, ಮೋಹನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ನೆಲ್ಲಿಹುದಿಕೇರಿ: ಕರ್ನಾಟಕ ಪಬ್ಲಿಕ್ ಶಾಲೆ ನೆಲ್ಲಿಹುದಿಕೇರಿಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಸರಳವಾಗಿ ನಡೆಯಿತು. ಕೆ.ಪಿ.ಎಸ್. ಶಾಲೆಯ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಅಚ್ಚಯ್ಯ ಪಿ.ಸಿ. ಧ್ವಜಾರೋಹಣ ನೆರವೇರಿಸಿದರು. ತಾಲೂಕು ಪಂಚಾಯಿತಿ ಸದಸ್ಯೆ ಸುಹದಾ ಅಶ್ರಫ್, ಕೆ.ಪಿ.ಎಸ್. ಶಾಲೆಯ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಉಪನ್ಯಾಸಕರು, ಸಹ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು. ಉಪಪ್ರಾಂಶುಪಾಲ ಅನಿಲ್‍ಕುಮಾರ್ ಸ್ವಾಗತಿಸಿ, ಉಪನ್ಯಾಸಕಿ ಜುಸ್ಟಿನ್ ಕೊರೆಯ ವಂದಿಸಿದರು.ಪಟ್ಟಣ ಪಂಚಾಯಿತಿ: ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಧ್ವಜಾರೋಹಣ ನೆರವೇರಿಸಿದರು. ಆರೋಗ್ಯ ನಿರೀಕ್ಷಕ ಉದಯಕುಮಾರ್ ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮೋಟಾರ್ ಯೂನಿಯನ್: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಕಾರು ನಿಲ್ದಾಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಸಂಘದ ಅಧ್ಯಕ್ಷ ಭರತ್, ಜೈಜವಾನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ, ನೋಟರಿ ಪದ್ಮನಾಭ, ಸಂಘದ ಕಾರ್ಯದರ್ಶಿ ಬಾಲಕೃಷ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

ಆಟೋ ಯೂನಿಯನ್: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಟೋ ನಿಲ್ದಾಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಅಧ್ಯಕ್ಷ ಮೋಹನ್, ಕಾರ್ಯದರ್ಶಿ ಗಂಗಾಧರ್, ಸಹ ಕಾರ್ಯದರ್ಶಿ ಬಿ.ಎಸ್. ಜನಾರ್ಧನ್ ಸೇರಿದಂತೆ ಪದಾಧಿಕಾರಿಗಳು, ಆಟೋ ಚಾಲಕರು ಭಾಗವಹಿಸಿದ್ದರು.

ಇದೇ ಸಂದರ್ಭ ಇನ್ನರ್‍ವೀಲ್ ಕ್ಲಬ್‍ನಿಂದ ಆಟೋ ಚಾಲಕರು ಮತ್ತು ಸಾರ್ವಜನಿಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಯಿತು. ಕ್ಲಬ್‍ನ ಅಧ್ಯಕ್ಷೆ ಕವಿತಾ ವಿರೂಪಾಕ್ಷ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಭಾರತೀಯ ಯುವಕ ಸಂಘ: ಆಲೇಕಟ್ಟೆ ರಸ್ತೆಯ ಭಾರತೀಯ ಯುವಕ ಸಂಘದ ವತಿಯಿಂದ ಕಚೇರಿ ಆವರಣದಲ್ಲಿ ಧ್ವಜಾರೋಹಣ ಮಾಡಲಾಯಿತು. ಸಂಘದ ಅಧ್ಯಕ್ಷ ಹೆಚ್.ಕೆ. ಗಂಗಾಧರ್, ಕಾರ್ಯದರ್ಶಿ ಕೃಷ್ಣಮೂರ್ತಿ ಸೇರಿದಂತೆ ಪದಾಧಿಕಾರಿಗಳಾದ ಸತೀಶ್, ಮೋಹನ್, ಶಶಿಕುಮಾರ್, ನರಸಿಂಹ, ರಾಜೇಂದ್ರ, ನೆಹರು, ಮಂಜುನಾಥ್, ಉಮೇಶ್ ಸೇರಿದಂತೆ ಇತರರು ಭಾಗಿಯಾಗಿದ್ದರು.ಬಸವನಹಳ್ಳಿ ಪ್ರೌಢಶಾಲೆ ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬಸವನಹಳ್ಳಿ ಶಾಲೆಯಲ್ಲಿ 74ನೇ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಪುರುಷೋತ್ತಮ್ ನೆರವೇರಿಸಿದರು.

ಈ ಸಂದರ್ಭ ಶಾಲೆಯ ಮುಖ್ಯಶಿಕ್ಷಕ ಕೃಷ್ಣನಾಯ್ಕ, ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮಣ, ಶಿಕ್ಷಕ ವೆಂಕಟೇಶ್ ಹಾಗೂ ಶಿಕ್ಷಕ ವೃಂದದವರು ಭಾಗಿಯಾಗಿದ್ದರು.

ಗುಡುಗಳಲೆ-ಶನಿವಾರಸಂತೆ: ಶನಿವಾರಸಂತೆ ಗುಡುಗಳಲೆ ಶಾಫಿ ಬದ್ರಿಯಾ ಮಸೀದಿ ಆಡಳಿತ ಮಂಡಳಿ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಸ್ತಫ ಧ್ವಜಾರೋಹಣ ನೆರವೇರಿಸಿದರು.

ಶಿಕ್ಷಕ ಷಂಶುದ್ದೀನ್ ಶಿರಂಗಾಲ ಸ್ವಾಗತಿಸಿದರು. ಮಸೀದಿ ಧರ್ಮ ಗುರು ಹಸೈನಾರ್ ಫೈಸಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಹನೀಫ ಅವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಸಹ ಕಾರ್ಯದರ್ಶಿ ಶಾಫಿ, ಪ್ರಧಾನ ಕಾರ್ಯದರ್ಶಿ ಶರೀಫ್, ಉಪಾಧ್ಯಕ್ಷ ಅಬೂ, ಅಬ್ದುಲ್ ರಝಾಖ್, ಕೋಶಾಧಿಕಾರಿ ಹಸೈನಾರ್ ಉಸ್ತಾದ್ ಹಾಗೂ ಊರಿನ ಹಿರಿಯರು, ಯುವಕರು, ವಿದ್ಯಾರ್ಥಿಗಳು ಮತ್ತು ಇನ್ನಿತರರು ಉಪಸ್ಥಿತರಿದ್ದರು.

ಶಮೀರ್ ಫೈಸಿ ವಂದಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.

ಮಡಿಕೇರಿ ಎಸ್.ಕೆ.ಎಸ್.ಎಸ್.ಎಫ್.: ಕೇಂದ್ರ ಸಮಿತಿಯ ನಿರ್ದೇಶನದಂತೆ ಪ್ರತಿ ವರ್ಷ ಆಗಸ್ಟ್ 15 ರಂದು ನಡೆಸಿಕೊಂಡು ಬರುವ ಫ್ರೀಡಂ ಸ್ಟಾರ್ ಈ ಬಾರಿ ಶಾಖಾ ಮಟ್ಟದಲ್ಲಿ ಸರ್ಕಾರದ ಎಲ್ಲಾ ಮಾರ್ಗ ಸೂಚಿಗಳನ್ನು ಪಾಲಿಸುವುದರೊಂದಿಗೆ ಆಚರಿಸಲಾಯಿತು.

ಕೊಡಗಿನ ಕುಶಾಲನಗರ, ಕೊಡ್ಲಿಪೇಟೆ, ಸುಂಟಿಕೊಪ್ಪ, ಪೆÇನ್ನಂಪೇಟೆ, ವೀರಾಜಪೇಟೆ, ನೆಲ್ಲಿಹುದಿಕೇರಿ, ಮಾಪಿಳೆತೋಡು, ಚೋಕಂಡಳ್ಳಿ, ಕೂಡಿಗೆ, ಎಡಪಲಾ, ಕಡಂಗ, ಶನಿವಾರಸಂತೆ, ಎಮ್ಮೆಮಾಡು ಮುಂತಾದ ಶಾಖೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಭಾಗಮಂಡಲ: ಅಯ್ಯಂಗೇರಿಯಲ್ಲಿ 74ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಅಯ್ಯಂಗೇರಿ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಅಬ್ದುಲ್ ರಶೀದ್ ಧ್ವಜಾರೋಹಣ ಮಾಡಿದರು. ಅಬ್ದುಲ್ ಖಾದರ್ ಮುಸ್ಲಿಯಾರ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಉಬೈದ್ ಬಾಖವಿ ನಿರ್ವಹಿಸಿದರು.

ಸ್ವತಂತ್ರ ದಿನದ ಅಂಗವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನೂರಕ್ಕೂ ಅಧಿಕ ಕಾರ್ಯಕರ್ತರಿಂದ ಸಂಪೂರ್ಣ ಗ್ರಾಮವನ್ನು ಸ್ವಚ್ಛ ಮಾಡಲಾಯಿತು. ಹಂಝ ಸಖಾಫಿ ಸ್ವಾಗತಿಸಿ, ರಬೀಹ್ ವಂದಿಸಿದರು.ಚೆಟ್ಟಳ್ಳಿ: ಚೆಟ್ಟಳ್ಳಿಯ ಯುವಕರ ತಂಡ ರಾಷ್ಟ್ರಧ್ವಜವನ್ನು ಹಿಡಿದು ಬೆಟ್ಟ ಗುಡ್ಡಗಳ ನಡುವೆ ತೆರೆದ ವಾಹನದಲ್ಲಿ ತೆರಳಿ ವಿನೂತನ ರೀತಿಯಲ್ಲಿ 74ನೇ ಸ್ವಾತಂತ್ರೋತ್ಸವ ಆಚರಿಸಲಾಯಿತು.

ಕಳೆದ 2 ವರ್ಷಗಳಿಂದ ಆಗಸ್ಟ್‍ನಲ್ಲಿ ವಿಪರೀತವಾದ ಗಾಳಿ-ಮಳೆಯಿಂದಾಗಿ ಕೊಡಗಿನ ವಿವಿಧ ಕಡೆ ಬೆಟ್ಟಗುಡ್ಡಗಳು ಕುಸಿದು ಹಲವು ಸಾವು-ನೋವುಗಳಾಗುತ್ತಿವೆ. ಈ ಬೆಟ್ಟಗುಡ್ಡಗಳನ್ನು ಉಳಿಸಿದರೆ ಮಾತ್ರ ನಮ್ಮ ಮುಂದಿನ ಬದುಕು ಸಾಧ್ಯವೆಂಬುದನ್ನು ಸಾರಲು ಬೆಟ್ಟದ ಸಮೀಪದ ಗುಡ್ಡದ ಮೇಲೆ ರಾಷ್ಟ್ರದ ಬಾವುಟವನ್ನು ಹಿಡಿದು ವಿನೂತನ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ತಂಡದಲ್ಲಿ ಚೆಟ್ಟಳ್ಳಿಯ ಯುವಕರಾದ ಕರುಣ್ ಕಾಳಯ್ಯ, ಶಿವು ನಂಜಪ್ಪ, ನವೀನ್ ನಾಣಯ್ಯ, ಗಿರೀಶ್ ಬಿದ್ದಪ್ಪ, ಚಿರಂತ್ ಚಂಗಪ್ಪ, ವಚನ್ ಕಾಳಪ್ಪ ಭಾಗವಹಿಸಿದ್ದರು.ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ: ಪೆÇನ್ನಂಪೇಟೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ ಗಣೇಶ್ ಹಾಗೂ ಉಪಾಧ್ಯಕ್ಷೆ ಮಂಜುಳ ಸುರೇಶ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಪಿಡಿಒ ಪುಟ್ಟರಾಜು, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಹಾಜರಿದ್ದರು.

ವಲಯ ಅರಣ್ಯಾಧಿಕಾರಿ ಕಚೇರಿ: ಪೆÇನ್ನಂಪೇಟೆ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಡಿಎಫ್‍ಓ ಅರಮಣಮಾಡ ತೀರ್ಥ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಡಿವೈಆರ್‍ಎಫ್‍ಓಗಳು, ಅರಣ್ಯ ರಕ್ಷಕರು, ಆರ್‍ಆರ್‍ಟಿ ಸಿಬ್ಬಂದಿಗಳು ಹಾಜರಿದ್ದರು.

ಕರ್ನಾಟಕ ಪಬ್ಲಿಕ್ ಶಾಲೆ: ಪೆÇನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಮುಖ್ಯೋಪಾಧ್ಯಾಯ ಬಿ.ಎಂ. ವಿಜಯ ಧ್ವಜಾರೋಹಣ ಮಾಡಿದರು.ಸಹ ಶಿಕ್ಷಕರು ಹಾಜರಿದ್ದರು.

ಆಟೋ ಚಾಲಕ ಸಂಘ: ಶ್ರೀ ನಂದೀಶ್ವರ ಆಟೋ ಚಾಲಕ ಹಾಗೂ ಮಾಲೀಕರ ಸಂಘದ ವತಿಯಿಂದ ಸ್ವಾತಂತ್ರ ದಿನ ಆಚರಿಸಲಾಯಿತು. ಸಂಘದ ಅಧ್ಯಕ್ಷ ಅಜ್ಜಿಕುಟ್ಟೀರ ಪೆÇನ್ನಪ್ಪ ಹಾಗೂ ಪೆÇನ್ನಂಪೇಟೆ ಉಪ ಠಾಣಾಧಿಕಾರಿ ಸುಂದರನ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಉಪಾಧ್ಯಕ್ಷ ಚಮ್ಮಟ್ಟಿರ ಶಾಂತ, ಕಾರ್ಯದರ್ಶಿ ಬಿ.ಎಸ್. ಸುರೇಶ್ ಹಾಗೂ ಸದಸ್ಯರು, ಪೆÇಲೀಸ್ ಸಿಬ್ಬಂದಿಗಳು ಇದ್ದರು. ಉಪ ಕಾರ್ಯದರ್ಶಿ ಚೀರಂಡ ಚಂಗಪ್ಪ ಸ್ವಾಗತಿಸಿ, ವಂದಿಸಿದರು.