(ನಿನ್ನೆಯ ಸಂಚಿಕೆಯಿಂದ) 3. ಸರಕಾರಿ ಹಾಗೂ ಖಾಸಗಿ ಶೈಕ್ಷಣಿಕ ಸಂಸ್ಥೆಗಳನ್ನು ಒಗ್ಗೂಡಿಸಿ, ರಾಷ್ಟ್ರದ ಶೈಕ್ಷಣಿಕ ಗುಣಮಟ್ಟ ಹಾಗೂ ಸಂಶೋಧನೆಯ ವೇಗ ವರ್ಧಿಸಿ, ಬಲಿಷ್ಟ ರಾಷ್ಟ್ರ ನಿರ್ಮಾಣಕ್ಕೆ ನಾಂದಿಯಾಗಬೇಕು ಎನ್ನುವ ಆಶಯ ಕಾಲ್ಪನಿಕ ಆದರ್ಶ (Uಣoಠಿiಚಿ) ಹಾಗೂ ಅವಾಸ್ತವಿಕವಾಗಬಹುದು. ಯಾಕೆಂದರೆ ಇಲ್ಲಿ ಹಿತಾಸಕ್ತಿಗಳ ಸಂಘರ್ಷಕ್ಕೆ ಹೆಚ್ಚಿನ ಸಾಧ್ಯತೆ ಇದೆ. ಖಾಸಗಿ ಒಡೆತನ ಹಾಗೂ ಸಾರ್ವಜನಿಕ ಒಡೆತನದ ಕೂಡುವಿಕೆ ಬಹಳಷ್ಟು ಕಷ್ಟ ಸಾಧ್ಯವಾದ ಪ್ರಸ್ತಾವನೆ.

ಪ್ರಸಕ್ತ ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ಗಮನಿಸಿದಾಗ ರಾಜಿ ಮಾಡಿಕೊಂಡು ನಿರ್ವಹಿಸುವುದು ಒಂದು ಹರ ಸಾಹಸ. (ಉದಾ: ಖಾಸಗಿ ವೃತ್ತಿಪರ ಕಾಲೇಜುಗಳಲ್ಲಿ ಸೀಟು ಹಂಚಿಕೆ, ಕೋವಿಡ್ 19ರ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಹಾಗೂ ಸವಲತ್ತುಗಳ ಹಂಚಿಕೆಯಲ್ಲಿ ಆದ ಗೊಂದಲಗಳು). ಮೀಸಲಾತಿಯ ಬಗ್ಗೆ ಸ್ಪಷ್ಟ ಉಲ್ಲೇಖ ಹಾಗೂ ವಿವರಣೆಗಳಿಲ್ಲ.

4. ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಕಾಲಮಿತಿ, ಕೇಂದ್ರ ಹಾಗೂ ರಾಜ್ಯ ಬಜೆಟ್‍ಗಳಲ್ಲಿ ಹಣಕಾಸಿನ ಉತ್ತರದಾಯಿತ್ವದ ಕುರಿತಂತೆ ಈ ಶಿಕ್ಷಣ ನೀತಿಯಲ್ಲಿ ಸ್ಪಷ್ಟ ವಿವರಣೆ ಹಾಗೂ ಉಲ್ಲೇಖಗಳಿರುವುದಿಲ್ಲ.

5. ಈ ಹಿನ್ನೆಲೆಯಲ್ಲಿ ಈ ಆಶಯಗಳು ಬರೇ ಘೋಷಣೆಯಾಗಿ ಉಳಿದುಬಿಡುವ ಆತಂಕ ಹಾಗೂ ಹೆದರಿಕೆ ಕೂಡಾ ಕಾಣುತ್ತದೆ. (ಉದಾ: ಕೋವಿಡ್ 19ರ ಸಂದರ್ಭದಂದು ಎಂಎಸ್‍ಎಂಇ ಗೆ ಸಾಲ ನೀಡಿದರೆ ಅದಕ್ಕೆ ಕೇಂದ್ರ ಸರಕಾರ ನೀಡುವ ಭದ್ರತೆ, ಮುದ್ರಾ ಸಾಲ ಯೋಜನೆ)

ಉತ್ತರವ ಅರಸುತ್ತಾ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಲವಾರು ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಪೈಪೋಟಿ ನಡೆಸಬಹುದು. ಪ್ರತಿಯೊಂದು ರಾಜಕೀಯ ಪಕ್ಷಗಳಿಗೆ ಅದರದೇ ಆದ ಒಂದು ಪ್ರಣಾಳಿಕೆಯನ್ನು ಜನರ ಮುಂದಿಡುತ್ತಾರೆ. ಎಲ್ಲಾ ರಾಜಕೀಯ ಪಕ್ಷಗಳ ಪ್ರಣಾಳಿಕೆಯನ್ನು ಗಮನಿಸಿದಾಗ ರಾಷ್ಟ್ರ ಹಿತದ ಬದಲಿಗೆ ಪಕ್ಷದ ಹಿತವೇ ಎದ್ದು ಕಾಣುತ್ತದೆ. ಶಿಕ್ಷಣ ಕ್ಷೇತ್ರ, ರಕ್ಷಣಾ ಕ್ಷೇತ್ರ (ಆeಜಿeಟಿಛಿe), ಹಾಗೂ ಅಭಿವೃದ್ಧಿ ಕ್ಷೇತ್ರ (ಆeveಟoಠಿmeಟಿಣ) ಇದರಲ್ಲಿ ಯಾವತ್ತೂ ರಾಜಕೀಯ ಮಾಡಬಾರದು. ಯಾಕೆಂದರೆ ಶಿಕ್ಷಣದ ಮೂಲಕ ಅಭಿವೃದ್ಧಿ ಹಾಗೂ ರಕ್ಷಣೆ ಸಾಧ್ಯವಾಗುತ್ತದೆ.

ಇಲ್ಲಿ ಉನ್ನತ ಶಿಕ್ಷಣದ ಜೊತೆಯಲ್ಲೇ ಸಂಶೋಧನೆ ಹಾಗೂ ಆವಿಷ್ಕಾರಗಳು ಒಳಗೊಂಡಿದೆ. ಸರಕಾರದ ಧನ ಸಹಾಯವಿಲ್ಲದೆ ಸಂಶೋಧನೆಗಳು ಸಾಧ್ಯವಾಗುವುದಿಲ್ಲ. (ಉದಾ.: ಔಘಿWಔಖಆ ಹಾಗೂ ಊಂಖWಂಖಆ ಇದರಲ್ಲಿ ಸರಕಾರಿ ಹಾಗೂ ಖಾಸಗಿ ಬಹುರಾಷ್ಟ್ರೀಯ ಕಂಪೆನಿಗಳ ಪಾಲಲ್ಲಿ ಕೋವಿಡ್ 19 ಲಸಿಕೆ ತಯಾರಾಗುತ್ತಿದೆ) ಖಾಸಗಿ ಸಂಸ್ಥೆಗಳು ನಿಂತಿರುವುದೇ ಲಾಭ ಹಾಗೂ ನಷ್ಟದ, ಆದಾಯ ಹಾಗೂ ಖರ್ಚಿನ ತಳಹದಿಯ ಮೇಲೆ ಹಾಗೂ ಇದರಲ್ಲಿ ಒಂದು ಸಮತೋಲನ ಕಾಪಾಡುವ ನಿರ್ವಹಣಾ ಸಾಮಥ್ರ್ಯದಲ್ಲಿ. ಸಂದಿಗ್ಧ ಪರಿಸ್ಥಿತಿಯಲ್ಲಿ ಖಾಸಗಿಯವರು ಸರಕಾರದಿಂದ ಸಹಾಯಧನ ಹಾಗೂ ಪ್ರೋತ್ಸಾಹ ಧನದ ನಿರೀಕ್ಷೆಯಲ್ಲಿರುತ್ತಾರೆ. ಯಾಕೆಂದರೆ ವ್ಯಕ್ತಿ ಹಾಗೂ ಖಾಸಗಿ ಸಂಸ್ಥೆಗೆ ಹೋಲಿಸಿದರೆ ಸರಕಾರ ಎನ್ನುವುದು ಸರ್ವಶಕ್ತ ಹಾಗೂ ಸರ್ವಕಾಲಿಕ ಸತ್ಯ.

ಈ ಎಲ್ಲಾ ಹಿನ್ನೆಲೆಯಲ್ಲಿ ಸವಾಲಾಗಿರುವ ಸಮಸ್ಯೆಗಳನ್ನು ಸ್ಪಷ್ಟ ನಿಲುವಿನ, ನಿರ್ಧಿಷ್ಟ ಕಾರ್ಯಸೂಚಿ ಹಾಗೂ ಕಾಲಮಿತಿಯ ಹಂತಗಳನ್ನು ಹೆಚ್ಚಿನ ಉತ್ತರದಾಯಿತ್ವ ಹಾಗೂ ಪಾರದರ್ಶಕತೆಯಲ್ಲಿ ಜಾರಿಗೊಳಿಸಲು ಪ್ರಯತ್ನಿಸಿದರೆ ಇದು ಸಾಧ್ಯವಾಗಬಹುದು ಎನ್ನುವುದೇÀ ಮುಕ್ತಾಯದ ಆಶಯ.

ಆನೋ ಭದ್ರಾಃ ಕೃತವೊ ಯಂತು ವಿಶ್ವತಃ

ಉದಾತ್ತ ಚಿಂತನೆಗಳು ಎಲ್ಲಡೆಯಿಂದ ಹರಿದು ಬರಲಿ

- ಡಾ. ಪಿ.ಎನ್. ಉದಯಚಂದ್ರ, ಮುಖ್ಯಸ್ಥರು, ವಾಣಿಜ್ಯ ವಿಭಾಗ, ಶ್ರೀ ಧ.ಮಂ. ಸ್ವಾಯತ್ತ ಕಾಲೇಜು, ಉಜಿರೆ.

(ಮುಗಿಯಿತು.)