ಕೂಡಿಗೆ, ಆ. 18: ಕುಶಾಲನಗರ ಹೋಬಳಿಯ ಅನೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಎಕರೆ ಭೂಮಿಯಲ್ಲಿ ರೈತರು ಬೇಸಾಯ ಮಾಡುತ್ತಿದ್ದಾರೆ. ಈಗಾಗಲೇ ಇಪ್ಪತ್ತು ವರ್ಷಗಳೇ ಕಳೆದರೂ ತಮ್ಮ ಭೂಮಿಯ ಹಕ್ಕುಪತ್ರಗಳು ದೊರೆತಿಲ್ಲ.
ಕುಶಾಲನಗರ ಹೋಬಳಿ ವ್ಯಾಪ್ತಿಯ ಸೀಗೆಹೂಸೂರು, ಚಿಕ್ಕ ಅಳುವಾರ, ಅಳಿಲುಗುಪ್ಪೆ ಸೇರಿದಂತೆ ಎಂಟು ಗ್ರಾಮಗಳ ಅನೇಕ ರೈತರ ನೂರಾರು ಎಕರೆಗಳಷ್ಟು ಪ್ರದೇಶದ ಭೂಮಿಯ ಹಕ್ಕು ಪತ್ರಗಳು ಕಂದಾಯ ಇಲಾಖೆಯ ವತಿಯಿಂದ ವಿತರಣೆ ಆಗಿಲ್ಲ. ಈಗಾಗಲೇ ಅನೇಕ ವರ್ಷಗಳು ಕಳೆದಿರುವುದರಿಂದ ಸಂಬಂಧಿಸಿದ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ ಹಕ್ಕು ಪತ್ರವನ್ನು ನೀಡುವಂತೆ ಆಯಾ ವ್ಯಾಪ್ತಿಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಭಾಗದ ರೈತರು ಅನೇಕ ಬಾರಿ ಜಿಲ್ಲಾಧಿಕಾರಿಗಳಿಗೆ, ಉಪ ವಿಭಾಗಾಧಿಕಾರಿ, ತಾಲೂಕು ತಹಶೀಲ್ದಾರರು ಮತ್ತು ಕ್ಷೇತ್ರದ ಶಾಸಕರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.