ಸಿದ್ದಾಪುರ, ಆ. 18: ಈ ಬಾರಿ ಅತಿವೃಷ್ಟಿ ಸಂಭವಿಸಿ ಬೆಳೆ ಹಾನಿ ಆಗಿರುವ ಚೆಟ್ಟಳ್ಳಿ ವ್ಯಾಪ್ತಿಯ ರೈತರಿಂದ ತಾ. 20ರಂದು ಚೆಟ್ಟಳ್ಳಿ ಗ್ರಾ.ಪಂ. ಸಭಾಂಗಣದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಬೆಳಿಗ್ಗೆ 10 ಗಂಟೆ ಯಿಂದ ಮಧ್ಯಾಹ್ನದವರೆಗೆ ಅರ್ಜಿ ಗಳನ್ನು ಸ್ವೀಕರಿಸಲಿದ್ದಾರೆ. ಮಧ್ಯಾಹ್ನದ ನಂತರ ನೆಲ್ಲಿಹುದಿಕೇರಿ ಗ್ರಾ.ಪಂ. ಸಭಾಂಗಣದಲ್ಲಿ ಅರ್ಜಿಗಳನ್ನು ಸ್ವೀಕರಿ ಸಲಿದ್ದಾರೆ ಎಂದು ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್ ತಿಳಿಸಿದ್ದಾರೆ.