ಗೋಣಿಕೊಪ್ಪ ವರದಿ, ಆ. 18: ಭದ್ರಗೋಳ ಗ್ರಾಮದ ಪಿ.ಬಿ. ಕಾಳ ಅವರ ಪುತ್ರಿ ನೇತ್ರಾ (23) ತಾ. 17 ರಿಂದ ಕಾಣೆಯಾಗಿದ್ದಾರೆ. ಗೋಣಿಕೊಪ್ಪ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ನೇತ್ರಾ ಮನೆಯಿಂದ ಕೆಲಸಕ್ಕೆ ಹೋದವರು ಹಿಂತಿರುಗಿಲ್ಲ ಎಂದು ತಂದೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರ ಬಗ್ಗೆ ಮಾಹಿತಿ ಇರುವವರು 08274247333 ಸಂಖ್ಯೆಗೆ ಮಾಹಿತಿ ನೀಡುವಂತೆ ಗೋಣಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.