ಸೋಮವಾರಪೇಟೆ, ಆ. 18: ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಆಟಿ ಮಾಸಾಚರಣೆಯ ಅಂಗವಾಗಿ ಶ್ರೀ ಭುವನೇಶ್ವರಿ ಹೋಮ ನಡೆಯಿತು.
ಕೋವಿಡ್-19 ಹಿನ್ನೆಲೆಯಲ್ಲಿ ಆಟಿ ಮಾಸಾಚರಣೆಯ ದುರ್ಗಾದೀಪ ನಮಸ್ಕಾರ ಪೂಜೆಯನ್ನು, ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಅರ್ಚಕರ ಸಮ್ಮುಖದಲ್ಲಿ, ಕಳೆದ ಮೂರು ದಿನಗಳಿಂದ ಸರಳವಾಗಿ ನೆರವೇರಿಸಲಾಯಿತು.
ನಾಲ್ಕನೇ ದಿನವಾದ ಶನಿವಾರ ಬೆಳಗ್ಗೆ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿಯವರ ಪೌರೋಹಿತ್ಯದಲ್ಲಿ ಗಣಪತಿ ಹೋಮ ಹಾಗೂ ಶ್ರೀ ಭುವನೇಶ್ವರಿ ಹೋಮ ನಡೆಯಿತು. ಅರ್ಚಕರುಗಳಾದ ಜಗದೀಶ್ ಉಡುಪ, ಹಾನಗಲ್ ಪ್ರಸಾದ್, ಚಂದ್ರಹಾಸ್‍ಭಟ್ ಸಹಕರಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್‍ಕುಮಾರ್, ಕಾರ್ಯದರ್ಶಿ ಎನ್.ಟಿ. ಪ್ರಸನ್ನ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.