ಕಣಿವೆ, ಆ. 19: ಗುಡ್ಡೆಹೊಸೂರು ಗ್ರಾಮ ಪಂಚಾಯತಿಯ ಬೆಟ್ಟಗೇರಿಯ ಅರಣ್ಯದಂಚಿನಲ್ಲಿ ಕಾವೇರಿ ಛಾಯಾಚಿತ್ರಗಾರರ ಸಂಘದ ವತಿಯಿಂದ ಗಿಡಗಳನ್ನು ನೆಟ್ಟು ಛಾಯಾ ಚಿತ್ರಗಾರರ ದಿನವನ್ನು ಆಚರಿಸಲಾಯಿತು. ಗಿಡಗಳನ್ನು ನೆಟ್ಟ ಬಳಿಕ ಸಂಘದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಎಸ್. ಶಾಂತಪ್ಪ, 180 ವರ್ಷ ಗಳಿಂದ ಛಾಯಾಚಿತ್ರಗಾರರ ದಿನವನ್ನು ಆಚರಿಸುತ್ತಿರುವ ಪುರವೆ ಇದೆ.
ನಾವುಗಳು ಕುಶಾಲನಗರದಲ್ಲಿ ರಚಿಸಿರುವ ಕಾವೇರಿ ಸಂಘದ ವತಿಯಿಂದ ಐದನೇ ಬಾರಿಗೆ ಈ ದಿನವನ್ನು ಆಚರಿಸುತ್ತಿದ್ದೇವೆ ಎಂದರು. ಸಂಘದ ಉಪಾಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ವಿ. ಕುಮಾರ್, ಖಜಾಂಚಿ ರಾಜು, ಸಹಕಾರ್ಯದರ್ಶಿ ಕೆ.ಎಸ್. ಬೋಪಯ್ಯ, ಸದಸ್ಯರಾದ ಮಲ್ಲಿಕಾರ್ಜುನ, ರಘು, ಲವ, ಮಾಧು, ಕಾಶಿ ಅರಣ್ಯ ರಕ್ಚಕರಾದ ಚಿತ್ತು, ಛಾಯಾಚಿತ್ರಗಾರರ ಸಂಘದ ಜಿಲ್ಲಾ ಅಧ್ಯಕ್ಷ ವಿಶುಕುಮಾರ್ ಇದ್ದರು.