ಶನಿವಾರಸಂತೆ, ಆ. 17: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ದಿನಗಳಿಂದ ಮಳೆ ಬಿಡುವು ನೀಡಿರುವುದರಿಂದ ಗದ್ದೆಗಳಲ್ಲಿ ಭತ್ತದ ನಾಟಿ ಕಾರ್ಯ ಬಿರುಸಿನಿಂದ ನಡೆದಿದೆ.
ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಳತ್ತೂರು ಚೀಕನಹಳ್ಳಿಯಲ್ಲಿ ಸುಮಾರು 80-90 ಎಕರೆ ಭತ್ತ ಬೆಳೆಯುವ ಗದ್ದೆ ಇದ್ದು, ನಾಟಿ ಕಾರ್ಯ ಮುಗಿದಿದೆ.