ಮಡಿಕೇರಿ, ಆ. 15: ಸುಂಟಿಕೊಪ್ಪ ಮಿಡ್ಲ್ಯಾಂಡ್ ತೋಟದ ಸಮೀಪದ ರಸ್ತೆಯಲ್ಲಿ ಗಾಯಗೊಂಡು ಆಯಾಸಗೊಂಡಿದ್ದ ಪುನುಗು ಬೆಕ್ಕನ್ನು ರಕ್ಷಣೆ ಮಾಡಲಾಗಿದೆ. ಬೆಕ್ಕು ಗಾಯಗೊಂಡಿದ್ದನ್ನು ಅರಿತ ಸ್ಥಳೀಯರು ಅರಣ್ಯ ಇಲಾಖೆ ರ್ಯಾಪಿಡ್ ರೆಸ್ಪಾನ್ಸ್ ತಂಡಕ್ಕೆ ತಿಳಿಸಿದ್ದು, ತಕ್ಷಣವೇ ಅಲ್ಲಿಗೆ ಬಂದ ಸಿಬ್ಬಂದಿ ರಸ್ತೆ ಬಳಿಯಿದ್ದ ಬೆಕ್ಕನ್ನು ರಕ್ಷಿಸಿದ್ದಾರೆ.
‘ಏಷಿಯನ್ ಸಿವೆಟ್ ಪಾಮ್’ ಎಂಬ ಜಾತಿಯ ಈ ಪುನುಗು ಬೆಕ್ಕು ಬೈನೆ ಮರಗಳು ಹೆಚ್ಚಿದ್ದಲ್ಲಿ ವಾಸಿಸುತ್ತದೆ. ಇದನ್ನು ಸದ್ಯಕ್ಕೆ ನಿಸರ್ಗಧಾಮದಲ್ಲಿ ಇರಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದೆಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ತಿಳಿಸಿದ್ದಾರೆ.