ಕುಶಾಲನಗರ, ಆ. 16: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 14ನೇ ವಾರ್ಡ್ ಹೆಚ್ಆರ್ಪಿ ಕಾಲೋನಿಯ ಸೀಲ್ಡೌನ್ ಪ್ರದೇಶದ ನಿವಾಸಿಗಳಿಗೆ ಪಂಚಾಯಿತಿ ಸದಸ್ಯೆ ಶೈಲಾ ಕೃಷ್ಣಪ್ಪ ಕಿಟ್ ವಿತರಣೆ ಮಾಡಿದರು.
ಸೀಲ್ಡೌನ್ನಿಂದ ತೀವ್ರ ಸಮಸ್ಯೆಗೆ ಒಳಗಾಗಿದ್ದ ಕುಟುಂಬಗಳಿಗೆ ಶೈಲಾ ಕೃಷ್ಣಪ್ಪ ಮತ್ತು ತಂಡದವರು ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.
ಈ ಸಂದರ್ಭ ಕುಡಾ ಸದಸ್ಯ ವಿ. ವೈಶಾಖ್, ಪ್ರಮುಖರಾದ ಎಂ.ಡಿ. ಕೃಷ್ಣಪ್ಪ, ಜಗದೀಶ್ ಭಂಡಾರಿ, ಸುಮನ್ ಇದ್ದರು.