ಮಡಿಕೇರಿ, ಆ. 15: ಜಿಲ್ಲೆಯಲ್ಲಿ ಹೊಸದಾಗಿ 29 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 951 ಪ್ರಕರಣಗಳು ವರದಿಯಾಗಿದ್ದು, 648 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 12 ಮಂದಿ ಸಾವನ್ನಪ್ಪಿದ್ದು, 291 ಪ್ರಕರಣಗಳು ಸಕ್ರಿಯವಾಗಿವೆ.
ಕೋವಿಡ್ ಆಸ್ಪತ್ರೆಯಲ್ಲಿ 81 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 110 ಮಂದಿ, ಹೋಮ್ ಐಸೋಲೇಶನ್‍ನಲ್ಲಿ 100 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 271 ನಿಯಂತ್ರಿತ ವಲಯಗಳಿವೆ.
ಹೊಸ ಪ್ರಕರಣಗಳ ವಿವರ
ಕುಶಾಲನಗರ ಮಾರ್ಕೆಟ್ ರಸ್ತೆಯ ಕಾವೇರಿ ಕಾಂಪ್ಲೆಕ್ಸಿನ 18 ವರ್ಷದ ಪುರುಷ, ಸುಂಟಿಕೊಪ್ಪ ಅಂಬೇಡ್ಕರ್ ಬಡಾವಣೆಯ 19 ವರ್ಷದ ಮಹಿಳೆ, ಶನಿವಾರಸಂತೆಯ ಅರಣ್ಯ ವಸತಿ ಗೃಹದ 35 ವರ್ಷದ ಮಹಿಳೆ, ಸೋಮವಾರಪೇಟೆ ಬಜೆಗುಂಡಿ ಮಾರಿಯಮ್ಮ ದೇವಾಲಯ ಬಳಿಯ 5 ವರ್ಷದ ಬಾಲಕಿ, ಮಡಿಕೇರಿ ಮುನೀಶ್ವರ ದೇವಾಲಯ ರಸ್ತೆಯ ರಾಜದರ್ಶನ್ ಹಿಂಭಾಗದ 51 ವರ್ಷದ ಮಹಿಳೆ, ಚೆಟ್ಟಳ್ಳಿಯ 46 ವರ್ಷದ ಮಹಿಳೆ, 20 ವರ್ಷದ ಪುರುಷ ಮತ್ತು 22 ವರ್ಷದ ಮಹಿಳೆ, ಮಡಿಕೇರಿ ಮುತ್ತಪ್ಪ ದೇವಾಲಯದ 57 ವರ್ಷದ ಮಹಿಳೆ, ವೀರಾಜಪೇಟೆಯ ಅಂಬೇಡ್ಕರ್ ನಗರದ 15 ವರ್ಷದ ಬಾಲಕ, 24 ಮತ್ತು 23 ವರ್ಷದ ಪುರುಷರು, ಶನಿವಾರಸಂತೆ ಬೈಪಾಸ್ ರಸ್ತೆಯ 41 ವರ್ಷದ ಪುರುಷ, ಕೂಡುಮಂಗಳೂರಿನ ಜನತಾ ಕಾಲೋನಿಯ 54 ವರ್ಷದ ಪುರುಷ, ಸೋಮವಾರಪೇಟೆ ಅರಣ್ಯ ವಸತಿ ಗೃಹದ 47 ವರ್ಷದ ಪುರುಷ, ಬಾಳೆಲೆ ಕೋಣನಕಟ್ಟೆ ಸಮೀಪದ 33 ವರ್ಷದ ಪುರುಷ, ಸಿದ್ದಾಪುರ 29 ಮತ್ತು 34 ವರ್ಷದ ಪುರುಷ, ಕುಶಾಲನಗರದ ಆದರ್ಶ ದ್ರಾವಿಡ ಕಾಲೋನಿಯ 23 ವರ್ಷದ ಪುರುಷ, ಕುಶಾಲನಗರ ಮುಳ್ಳುಸೋಗೆ ಕನ್ನಂಬಾಡಮ್ಮ ದೇವಾಲಯ ಬಳಿಯ 1ನೇ ಬ್ಲಾಕಿನ 38 ವರ್ಷದ ಪುರುಷ, ಕುಶಾಲನಗರ ವೆಂಕಟೇಶ್ವರ ಲೇಔಟಿನ 52 ವರ್ಷದ ಪುರುಷ, ವೀರಾಜಪೇಟೆ ಬೆಟ್ಟೋಳಿ ಗ್ರಾಮದ 55 ವರ್ಷದ ವ್ಯಕ್ತಿ, ವೀರಾಜಪೇಟೆ ಚೆನ್ನಯ್ಯನ ಕೋಟೆಯ ಹೊಲಮಾಳದ 10 ವರ್ಷದ ಬಾಲಕಿ, ವೀರಾಜಪೇಟೆ ಕುಟ್ಟ ಗ್ರಾಮದ ಬೊಳ್ಳೇರ ಗೇಟಿನ ಸಮೀಪದ 29 ವರ್ಷದ ಮಹಿಳೆ, ಗೋಣಿಕೊಪ್ಪದ ಶಾಂತಿನಗರದ 37 ವರ್ಷದ ಮಹಿಳೆ, ವೀರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 30 ವರ್ಷದ ಪುರುಷ, ವೀರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 21 ವರ್ಷದ ಪುರುಷ, ಮಡಿಕೇರಿ ಆಜಾದ್ ನಗರದ 30 ವರ್ಷದ ಮಹಿಳೆ ಮತ್ತು 3 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.