ಗೋಣಿಕೊಪ್ಪಲು, ಅ. 16, ಇಂದಿನ ರೈತರ ಆರ್ಥಿಕ ಸಂಕಷ್ಟದ ಸಮಯದಲ್ಲಿ ಹಾಲು ಉತ್ಪಾದನೆ ಮತ್ತು ಮಾರುಕಟ್ಟೆ ಬಗ್ಗೆ ಮಾಹಿತಿ ಕಾರ್ಯಕ್ರಮದ ಮೂಲಕ ರೈತರ ಆರ್ಥಿಕ ಸುಧಾರಣೆ ಆಗಲಿ ಎಂದು ಪೆÇನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಶ್ರೀ ಬೋಧ ಸ್ವರೂಪಾನಂದಜೀ ಮಹರಾಜ್ ನುಡಿದರು. ಈ ರೀತಿಯ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ರೈತರ ಜೀವನದಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದಾರೆ, ಕಾರ್ಯಕ್ರಮವು ಈ ಕೋವಿಡ್ 19ರ ಸಂದರ್ಭ ದಲ್ಲಿಯೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ನಡೆದಿದೆ ಎಂದರು.
ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕುಟ್ಟಾದ ಅನುಗ್ರಹ ಹೆಚ್‍ಪಿ ಪೆಟ್ರೋಲಿಯಂನ ಸಹಕಾರದೊಂದಿಗೆ ಹಾಲು ಉತ್ಪಾದನೆ ಮತ್ತು ಮಾರುಕಟ್ಟೆ ಕುರಿತು ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ ಅಮ್ಮತಿ ನಾಡು ಹಾಲು ಉತ್ಪಾದಕರ ಸಂಘದ ನಿಯೋಜಿತ ಅಧ್ಯಕ್ಷ ತುಷಾರ್ ಕುಲಕರ್ಣಿ ಮಾತನಾಡುತ್ತಾ; ರೈತರು ತಮ್ಮ ದೈನಂದಿನ ಕೆಲಸಗಳೊಂದಿಗೆ ಹೈನುಗಾರಿಕೆಯನ್ನು ನಡೆಸಿದರೆ ಹಾಲು ಮಾರಾಟ ಮಾತ್ರವಲ್ಲದೆ ಹಸುವಿನ ಸೆಗಣಿ ಮತ್ತು ಗಂಜಲ ಮಾರಾಟ ದಿಂದ ಹೆಚ್ಚಿನ ಹಣ ಗಳಿಸಬಹುದು. ಕುಟ್ಟ ಸುತ್ತಮುತ್ತಲಿನ ಗ್ರಾಮಗಳ ರೈತರು ದಿನಕ್ಕೆ 500 ಲೀಟರ್ ಹಾಲು ಉತ್ಪಾದಿಸಲು ಪ್ರಯತ್ನಪಟ್ಟರೆ ಇಲ್ಲಿಂದಲೇ ಹಾಲನ್ನು ಸಾಗಿಸುವ ವ್ಯವಸ್ಥೆ ಮಾಡಲು ಸಾಧ್ಯವಿದೆ. ಸರಕಾರದಿಂದ ಹೈನುಗಾರಿಕೆಗೆ ಪೆÇ್ರೀತ್ಸಾಹ ಧನ ಸಹಾಯ, ಸಾಲ, ವಿಮೆ ವ್ಯವಸ್ಥೆ ಇದ್ದು ಗ್ರಾಮ ಸಭೆ ಕರೆದು ಪ್ರಸ್ತಾವನೆಯನ್ನು ಸಲ್ಲಸಬೇಕಾಗಿದೆ ಎಂದರು. ಅಮ್ಮತ್ತಿ ನಾಡಿನಲ್ಲಿ ಕೇವಲ ದಿನಕ್ಕೆ 40 ಲೀ ಹಾಲಿನ ಸಂಗ್ರಹದಿಂದ ಪ್ರಾರಂಭಿಸಿದ್ದು 3 ತಿಂಗಳಿನಲ್ಲೇ 500 ಲೀ ಹಾಲು ಸಂಗ್ರಹವಾಗುತ್ತಿದೆ ಎಂದರು.
ಆರ್ಥಿಕ ವ್ಯವಸ್ಥೆ, ಸಾಲ ಮತ್ತು ಸಬ್ಸಿಡಿಗಳ ಬಗ್ಗೆ ಅಮ್ಮತ್ತಿ ಕೆನರಾ ಬ್ಯಾಂಕ್‍ನ ಪ್ರಬಂಧಕÀ ರಾಹುಲ್‍ನಾಥ್ ಮಾಹಿತಿ ನೀಡುತ್ತಾ ಅಮ್ಮತ್ತಿ ಬ್ಯಾಂಕ್ ನಿಂದ ಈಗಾಗಲೇ 250 ಕ್ಕೂ ಹೆಚ್ಚಿನ ರೈತರು ಅನುಕೂಲ ಪಡೆದಿರುವುದಾಗಿ ನುಡಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡುತ್ತಾ ತಾವು ಹಿಂದೆ ಪಂಚಾಯಿತಿ ಪ್ರಧಾನರಾಗಿ ದ್ದಾಗ ಈ ಪ್ರಯತ್ನ ನಡೆದಿತ್ತು. ಆದರೆ ಆಗ ಗೆಲುವು ಸಿಗಲಿಲ್ಲ, ಈಗ ಪರಿಸ್ಥಿತಿ ಬದಲಾಗಿದೆ ಸಾಗಾಣಿಕೆ ಸುಲಭ ವಾಗಿದೆ ಸರಕಾರದ ಸಹಕಾರ ಹಿಂದಿನಕ್ಕಿಂತಲೂ ಹೆಚ್ಚಿದೆ. ಜಯ ಗಳಿಸಲು ಸಾಧ್ಯವಿದೆ. ತಾವು ಸಂಪೂರ್ಣ ಸಹಕಾರ ನೀಡುವುದಾಗಿ ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕೇಶವ ಕಾಮತ್ ಹೈನ್ಯೋದ್ಯಮದಿಂದ ಸಾಧನೆ ಮಾಡಿದ ಹಲವರನ್ನು ಉದಾಹರಿಸಿ ಕುಟ್ಟ ಬಳಿಯ ಕೋತೂರಿನಲ್ಲಿ ಮುಕ್ಕಾಟೀರ ಹರೀಶ್ ಮತ್ತು ರೋಷನ್ ಎಂಬ ಯುವಕರು ದಿನವೊಂದಕ್ಕೆ 160 ಲೀ ಹಾಲು ಉತ್ಪಾದಿಸಿ ಮೈಸೂರು ಜಿಲ್ಲೆಯ ಅಳ್ಳೂರು ಬಳಿಯ ಮಾಲಂಗಿ ಹಾಲು ಘಟಕಕ್ಕೆ ಬೈಕಿನಲ್ಲಿ ಸಾಗಿಸಿ ವ್ಯವಹರಿಸುತ್ತಿದ್ದಾರೆ. ಅಂತಹವರಿಗೆ ಇಲ್ಲಿಯೇ ವ್ಯವಸ್ಥೆ ಆದಲ್ಲಿ ಅವರಂತೆ ಹಲವು ಯುವಕರು ಈ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಸಂವಾದದಲ್ಲಿ ಕುಟ್ಟ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಮುಕ್ಕಾಟೀರ ನವೀನ್ ಅಯ್ಯಪ್ಪ ಮತ್ತು ಚಂದನ್ ಕಾಮತ್ ಅವರಿಗೆ ಗ್ರಾಮ ಪಂಚಾಯಿತಿಯೊಂದಿಗೆ ವ್ಯವಹರಿಸಿ ಗ್ರಾಮಸಭೆ ನಡೆಸುವ ಜವಾಬ್ದಾರಿ ನೀಡಲಾಯಿತು. ಶ್ರೀ ಬೋಧ ಸ್ವರೂಪಾನಂದಜೀ ಮಹರಾಜ್ ರಾಷ್ಟ್ರಧ್ವಜಾರೋಹಣ ಮಾಡಿದರು.
ಇತ್ತೀಚೆಗೆ ತಲಕಾವೇರಿಯಲ್ಲಿ ಸಂಭವಿಸಿದ ದುರಂತದಲ್ಲಿ ಮಡಿದ ನಾರಾಯಣಾಚಾರ್ ಕುಟುಂಬಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಕುಟ್ಟ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಕಾಫಿಬೆಳೆಗಾರ ಮತ್ತು ರೈತರುಗಳಾದ ಸೂರತ್ ಸುಬ್ಬಯ್ಯ, ಚಕ್ಕೇರ ದೇವಯ್ಯ, ಚಕ್ಕೇರ ಗಣಪತಿ, ಗಣೇಶ್ ಶೆಟ್ಟಿ, ಫೈತ್ ಎಸ್ಟೇಟ್‍ನ ಮುತ್ತುಸ್ವಾಮಿ, ಕಳ್ಳಂಗಡ ಗೌತಮ್, ಕುಟ್ಟ ಆಟೋ ಚಾಲಕರ ಸಂಘದ ಅಧ್ಯಕ್ಷ ಸುರೇಶ್, ಸಿಂಕೋನ ರಾಜ, ಕಾಮತ್ ಗ್ರೂಪ್‍ನ ಪ್ರಮೋದ್ ಕಾಮತ್, ಶಾಂತಾರಾಮ್ ಕಾಮತ್, ಸಂಧ್ಯಾ ಕಾಮತ್, ಶ್ರೀನಾಥ್ ಭಟ್, ಸಂಗೀತಾ, ಪ್ರತಿಕ್ಷಾ, ಪ್ರಜ್ನಾ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಚಂದನ್ ಕಾಮತ್ ಸ್ವಾಗತಿಸಿದರು.