ನಾಪೋಕ್ಲು, ಆ. 16: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್, ವೀರಾಜಪೇಟೆ, ಮಡಿಕೇರಿ ವತಿಯಿಂದ ಬಿ.ಸಿ. ಟ್ರಸ್ಟ್ ಮಡಿಕೇರಿಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪ್ರಕೃತಿ ಅವಘಡಗಳ ಬಗ್ಗೆ ಮುನ್ನೆಚ್ಚರಿಕೆ, ವಿಪತ್ತುಗಳ ನಿರ್ವಹಣೆಗೆ ಸ್ಥಳೀಯವಾಗಿ ಸ್ವಯಂಸೇವಾ ಪಡೆಗಳ ಹಾಗೂ ವಿಪತ್ತು ನಿರ್ವಹಣಾ ಘಟಕಗಳ ಸ್ಥಾಪನೆ ಕಾರ್ಯಕ್ರಮದ ಸಂಯೋಜಕರ ತರಬೇತಿ ಕಾರ್ಯಾಗಾರವನ್ನು ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಡಾ. ಯೋಗೀಶ್ ಎ. ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪ್ರಾಕೃತಿಕ ಅನಾಹುತಗಳನ್ನು ಸಮಾಜದೊಂದಿಗೆ ಕೈಜೋಡಿಸಿ ಅವಘಡಗಳನ್ನು ಎದುರಿಸಲು ತಾಲೂಕು ಮಟ್ಟದಲ್ಲಿ ವಿಪತ್ತು ನಿರ್ವಹಣಾ ಘಟಕ ಸ್ಥಾಪಿಸಲಾಗುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಧನಂಜಯ ಅಗೊಳಿಕಜೆ ವಹಿಸಿದ್ದರು. ಯೋಜನಾಧಿಕಾರಿಗಳು, ಮೇಲ್ವಿಚಾರಕರು ಉಪಸ್ಥಿತರಿದ್ದರು.